‘ಪಾಪ್ ಕಾರ್ನ್ ಮಂಕಿ ಟೈಗರ್’ಗೆ ‘ಪವರ್’ಫುಲ್ ಸಾಥ್

718

ಆ್ಯಕ್ಷನ್ ಚಿತ್ರಗಳ ನಿರ್ದೇಶಕ ಸೂರಿ ಪಾಜೆಕ್ಟ್ ಆಗಿರುವ ಪಾಪ್ ಕಾರ್ನ್ ಮಂಕಿ ಟೈಗರ್ ಸಿನ್ಮಾಗೆ ನಟ ಪವರ್ ಸ್ಟಾರ್ ಪುನೀತರಾಜಕುಮಾರ ಸಾಥ್ ನೀಡಿದ್ದಾರೆ. ಟಗರು ಮೂವಿ ಬಳಿಕ ನಟ ಡಾಲಿ ಧನಂಜಯ ಹಾಗೂ ಸೂರಿ ಒಟ್ಟಿಗೆ ಕೆಲಸ ಮಾಡ್ತಿದ್ದು, ಅಂದು ಶಿವಣ್ಣ ಸೂರಿ ಚಿತ್ರದಲ್ಲಿ ಭರ್ಜರಿಯಾಗಿ ಮಿಂಚಿದ್ರು. ಇಂದು ಪುನೀತರಾಜಕುಮಾರ ಸರದಿ. ಹಾಗಂತ ಪವರ್ ಸ್ಟಾರ್ ಸಿನ್ಮಾದಲ್ಲಿ ಕಾಣಿಸಿಕೊಳ್ತಿದ್ದಾರಾ ಅಂತಾ ಕೇಳ್ಬೇಡಿ.

ಪಾಪ್ ಕಾರ್ನ್ ಮಂಕಿ ಟೈಗರ್ ಸಿನ್ಮಾದ ಆಡಿಯೋ ಹಕ್ಕುಗಳನ್ನ ಪುನೀತರಾಜಕುಮಾರ ಅವರ ಪಿಆರ್ ಕೆ ಸ್ಟುಡಿಯೋ ತೆಗೆದುಕೊಂಡಿದೆ. ಈಗಾಗ್ಲೇ ಮೂರು ಸಿನ್ಮಾಗಳಲ್ಲಿ ಸೂರಿ ಜೊತೆ ಕೆಲಸ ಮಾಡಿರುವ ಪುನೀತರಾಜಕುಮಾರ, ಇದೀಗ ಮತ್ತೊಂದು ರೀತಿ ಸಾಥ್ ನೀಡ್ತಿದ್ದಾರೆ. ಫಸ್ಟ್ ಲುಕ್, ಟೀಸರ್ ಬಿಡುಗಡೆ ವೇಳೆ ಈ ಬಗ್ಗೆ ಅಧಿಕೃತ ಅನೌನ್ಸ್ ಆಗಲಿದೆ.




Leave a Reply

Your email address will not be published. Required fields are marked *

error: Content is protected !!