ನಾಳೆ ಮಂಕಿ ಟೈಗರ್ ಆರ್ಭಟ.. ಶಿವಾಜಿಯ ಹುಡುಕಾಟ

371

ಸ್ಯಾಂಡಲ್ ವುಡ್ ಅಂಗಳದಲ್ಲಿ ನಾಳೆ ಎರಡು ಬಹುನಿರೀಕ್ಷಿತ ಚಿತ್ರಗಳು ರಿಲೀಸ್ ಆಗ್ತಿವೆ. ಒಂದು ದುನಿಯಾ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್. ಇನ್ನೊಂದು ಆಕಾಶ ಶ್ರೀವತ್ಸ ನಿರ್ದೇಶನದ ಶಿವಾಜಿ ಸುರತ್ಕಲ್. ಈಗಾಗ್ಲೇ ಸಿನಿ ಪ್ರೇಕ್ಷಕರನ್ನ ತುದಿಗಾಲ ಮೇಲೆ ನಿಲ್ಲಿಸಿದ ಚಿತ್ರಗಳು ಶಿವರಾತ್ರಿ ಹಬ್ಬಕ್ಕೆ ರಿಲೀಸ್ ಆಗ್ತಿವೆ.

ಪಾಪ್ ಕಾರ್ನ್ ಮಂಕಿ ಟೈಗರ್ ಮೂವಿ, ನಿರ್ದೇಶಕ ಸೂರಿಯ ಪಕ್ಕಾ ರಾ ಮಟಿರಿಯಲ್ ಸ್ಟೈಲ್ ಹಾಗೂ ಡಾಲಿ ಖ್ಯಾತಿಯ ನಟ ಧನಂಜಯ ನಟನೆ ಮತ್ತು ಶಿವಾಜಿ ಸುರತ್ಕಲ್ ಚಿತ್ರ ಪತ್ತೆದಾರಿ ಶೈಲಿಯ ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಜೊತೆಗೆ ನಟ ರಮೇಶ ಅರವಿಂದರ ಅದ್ಬುತ ಅಭಿನಯದಿಂದ ನೋಡುಗರಲ್ಲಿ ಕ್ರೇಜ್ ಕ್ರಿಯೇಟ್ ಮಾಡಿವೆ. ಈಗಾಗ್ಲೇ ಟೀಸರ್, ಟ್ರೇಲರ್ ಮೂಲಕ ಹೊಸ ಅಲೆ ಎಬ್ಬಿಸಿವೆ. ಹೀಗಾಗಿ ಶುಕ್ರವಾರ ರಿಲೀಸ್ ಆಗ್ತಿರುವ ಸಿನಿಮಾ ನೋಡಲು ಪ್ರೇಕ್ಷಕರು ರೆಡಿಯಾಗಿದ್ದಾರೆ.

ನಾಳೆ ಹಬ್ಬದ ರಜೆ. ಶನಿವಾರ ಹಾಗೂ ಭಾನುವಾರ ವೀಕೆಂಡ್ ಮಸ್ತಿ. ಹೀಗೆ ಮೂರು ದಿನ ರಜೆಯ ಮೂಡಿನಲ್ಲಿರುವ ಜನರು ಚಿತ್ರಮಂದಿರಗಳತ್ತ ಬರುವ ಸಾಧ್ಯತೆ ಹೆಚ್ಚಿದೆ. ಈ ಎರಡು ಚಿತ್ರಗಳಲ್ಲಿ ಅಭಿಮಾನಿಗಳು ಯಾವ ಚಿತ್ರವನ್ನ ಮೆಚ್ಚಿಕೊಳ್ತಾನೆ ಅನ್ನೋದು ನಾಳೆಯೇ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!