ಮಹದಾಯಿ ಗೆಜೆಟ್ ನೋಟಿಫಿಕೇಷನ್ ಗೆ ಗ್ರೀನ್ ಸಿಗ್ನಲ್

330

ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಗೆಜೆಟ್ ನೋಟಿಫಿಕೇಷನ್ ಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಬಹುದಿನಗಳಿಂದ ಉತ್ತರ ಕರ್ನಾಟಕ ಭಾಗದ ರೈತರು, ಮುಖಂಡರು ನಡೆಸ್ತಿರುವ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದೆ.

ನ್ಯಾಯಾಧೀಕರಣ ನೀಡುವ ತೀರ್ಪಿನ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಲಾಗಿದೆ. ಇದ್ರಿಂದಾಗಿ ರಾಜ್ಯಕ್ಕೆ ನ್ಯಾಯ ಸಿಕ್ಕಿದೆ ಅಂತಾ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಇನ್ನು ಜುಲೈ 15ರಿಂದ ಸತತವಾಗಿ ಈ ಸಂಬಂಧ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿರುವ ನ್ಯಾಯಪೀಠ ಮೂರೂ ರಾಜ್ಯಗಳಿಗೆ ದಾಖಲೆ ಸಲ್ಲಿಸುವಂತೆ ಸೂಚನೆ ನೀಡಿದೆ.

ಸುಪ್ರೀಂ ಕೋರ್ಟ್ ಇಂದು ನೀಡಿರುವ ತೀರ್ಪಿನಿಂದ ಉತ್ತರ ಕರ್ನಾಟಕ ಭಾಗದ ಜನಕ್ಕೆ ಖುಷಿಯಾಗಿದೆ. 13.42 ಟಿಎಂಸಿ ನೀರು ಸಿಗಲಿದೆ ಅನ್ನೋದು ಒಂದಿಷ್ಟು ಭರವಸೆ ಮೂಡಿದೆ. ಆದಷ್ಟು ಬೇಗ ಇದು ಇತ್ಯರ್ಥವಾದ್ರೆ ಮೂರು ದಶಕಗಳ ಹೋರಾಟಕ್ಕೆ ಜಯ ಸಿಕ್ಕಂತಾಗಲಿದೆ.




Leave a Reply

Your email address will not be published. Required fields are marked *

error: Content is protected !!