ಪ್ರಧಾನಿ ಓದಿನ ಬಗ್ಗೆ ಕೇಳಿದ್ದಕ್ಕೆ ಕೇಜ್ರಿವಾಲ್ ಗೆ ಗುಜರಾತ್ ಹೈಕೋರ್ಟ್ ದಂಡ

123

ಪ್ರಜಾಸ್ತ್ರ ಸುದ್ದಿ

ನವದೆಹಲಿ: ತಮ್ಮ ಜನನಾಯಕರು ಏನು ಓದಿದ್ದಾರೆ ಎಂದು ತಿಳಿಯುವ ಕುತೂಹಲ ಸಹಜವಾಗಿ ಆಯಾ ಭಾಗದ ಮತದಾರರು ಸೇರಿ ದೇಶವಾಸಿಗಳದ್ದು ಆಗಿರುತ್ತೆ. ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳು ವಿವರ ನೀಡಿರುತ್ತಾರೆ. ಆ ಮೂಲಕವೂ ತಿಳಿದುಕೊಳ್ಳಬಹುದು. ಆದರೆ, ಇದೀಗ ಪ್ರಧಾನಿ ಮೋದಿ ಓದಿನ ಬಗ್ಗೆ ಕೇಳಿದ ದೆಹಲಿ ಸಿಎಂ ಕೇಜ್ರಿವಾಲ್ ಗೆ ಗುಜರಾತ್ ಹೈಕೋರ್ಟ್ ದಂಡ ವಿಧಿಸಿದೆ.

ಪ್ರಧಾನಿ ಓದಿನ ಬಗ್ಗೆ ಸಾರ್ವಜನಿಕಗೊಳಿಸುವ ಅಗತ್ಯವಿಲ್ಲ ಎಂದು ಸಿಐಸಿ ಆದೇಶಕ್ಕೆ ತಡೆಯಾಜ್ಞೆ ನೀಡಿ ಪಿಎಂಒಗೆ ಹೈಕೋರ್ಟ್ ತಿಳಿಸಿದೆ. ಅಲ್ಲದೆ ಸಿಎಂ ಅರವಿಂದ್ ಕೇಜ್ರಿವಾಲ್ ಗೆ 25 ಸಾವಿರ ದಂಡ ವಿಧಿಸಿದೆ. ಇದಕ್ಕೆ ಕೇಜ್ರಿವಾಲ್ ಕಿಡಿ ಕಾರಿದ್ದಾರೆ. ಪ್ರಧಾನಿ ಓದಿನ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಿಲ್ಲವೇ? ತಮ್ಮ ಪ್ರಧಾನಿ ಎಷ್ಟು ಓದಿದ್ದಾರೆ ಎಂದು ದೇಶದ ಜನರಿಗೆ ತಿಳಿದುಕೊಳ್ಳುವ ಹಕ್ಕಲಿಲ್ಲವೇ? ಪ್ರಧಾನಿ ಪದವಿ ನೋಡಲು ಬಯಸುವವರಿಗೆ ದಂಡ ವಿಧಿಸಲಾಗುತ್ತದೆಯೇ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ಈ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಅನಕ್ಷರಸ್ಥ ಹಾಗೂ ಕಡಿಮೆ ವಿದ್ಯಾವಂತ ಪ್ರಧಾನಿ ಈ ದೇಶಕ್ಕೆ ಅಪಾಯಕಾರಿ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!