ಸಿಎಸ್ಕೆ ಮಣಿಸಿದ ಹಾರ್ದಿಕ್ ಪಡೆ

226

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಅಹಮದಾಬಾದ್: ಐಪಿಎಲ್ 16ನೇ ಆವೃತ್ತಿ ಶುಕ್ರವಾರ ಸಂಜೆ ಭರ್ಜರಿಯಾಗಿ ಶುರುವಾಗಿದೆ. ಎಂದಿನಂತೆ ವರ್ಣರಂಜಿತ ಕಾರ್ಯಕ್ರಮಗಳು ನಡೆದಿವೆ. ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವೆ ನಡೆದಿದ್ದು, ತವರು ನೆಲದಲ್ಲಿ ಗೆಲ್ಲುವ ಮೂಲಕ ಹಾರ್ದಿಕ್ ಪಾಂಡ್ಯೆ ಬಳಗ ಶುಭಾರಂಭ ಮಾಡಿದೆ.

ಟಾಸ್ ಗೆದ್ದ ಫಿಲ್ಡಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್ ಟೀಂ ಲೆಕ್ಕಾಚಾರ ಸರಿಯಾಗಿತ್ತು. ಆದರೆ, ಅದನ್ನು ಕಂಟ್ರೋಲ್ ಮಾಡಿದ್ದು ಸಿಎಸ್ಕೆ ತಂಡದ ಋತುರಾಜ್ ಗಾಯಕ್ವಾಡ್. 9 ಸಿಕ್ಸ್, 4 ಫೋರ್ ಗಳೊಂದಿಗೆ 50 ಬೌಲ್ ಗಳಲ್ಲಿ 92 ರನ್ ಗಳಿಸಿ ಶತಕ ವಂಚಿತರಾದರು. ಉಳಿದಂತೆ ಯಾರೂ ಅಷ್ಟೊಂದು ಅಬ್ಬರಿಸಲಿಲ್ಲ. ನಾಯಕ ಧೋನಿ ಅಜೇಯ 14 ರನ್ ಗಳಿಸಿದರು.

ಅಂತಿಮವಾಗಿ ಸಿಎಸ್ಕೆ  7 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ಜಿಟಿ ಪರ ಮೊಹಮ್ಮದ್ ಶಮಿ, ರಶೀದ್ ಖಾನ್, ಅಲ್ಝರ್ ಜೋಶಪ್ ತಲಾ 2 ವಿಕೆಟ್ ಪಡೆದರು. ಜೋಸ್ ಲಿಟಲ್ 1 ವಿಕೆಟ್ ಪಡೆದರು.

ನಂತರ ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ, ಶುಭಗ್ನಂ ಗಿಲ್ 63, ವೃದ್ಧಮಾನ್ ಶಾ 25, ಸುದರ್ಶನ್ 22, ವಿಜಯ್ ಶಂಕರ್ 27 ರನ್ ಗಳ ಆಟದಿಂದಾಗಿ 19.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಗೆಲುವಿನ ದಡ ಸೇರಿತು. ನಾಯಕ ಹಾರ್ದಿಕ್ ಪಾಂಡ್ಯೆ ಕೇವಲ 8 ರನ್ ಗಳಿಸಿ ನಿರಾಸೆ ಮೂಡಿಸಿದರು. ಸಿಎಸ್ಕೆ ಪರ ರಾಜವರ್ಧನ್ ಹಂಗರ್ಕರ್ 3 ವಿಕೆಟ್ ಪಡೆದು ಮಿಂಚಿದರು. ಜಡೇಜಾ, ತುಷಾರ್ ತಲಾ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!