8.640 ಲೀಟರ್ ಅಕ್ರಮ ಮದ್ಯ ವಶ

259

ಪ್ರಜಾಸ್ತ್ರ ಸುದ್ದಿ

ದೇವರ ಹಿಪ್ಪರಗಿ: ಬೈಕ್ ಮೇಲೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 8.640 ಲೀಟರ್ ನ 96 ಮದ್ಯದ ಟೆಟ್ರಾ ಪ್ಯಾಕೆಟ್ ಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಪಟ್ಟಣದಿಂದ ಸುಮಾರು 2 ಕಿಲೋ ಮೀಟರ್ ದೂರದಲ್ಲಿ ವಶ ಪಡೆಸಿಕೊಂಡಿದ್ದಾರೆ. ಸಿಂದಗಿ ವಲಯದ ದೇವರ ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ತಪಾಸಣೆ ನಡೆಸಿದಾಗ ಇದು ಬೆಳಕಿಗೆ ಬಂದಿದೆ.

ಪಂಚರ ಸಮಕ್ಷಮದಲ್ಲಿ 63,372 ರೂಪಾಯಿ ಮೌಲ್ಯದ ಮದ್ಯವನ್ನು ಜಪ್ತಿ ಮಾಡಿದ್ದು ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 32 ಹಾಗೂ 38(ಎ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಮ್ಮನಜೋಗಿ ಗ್ರಾಮದ ಆರೋಪಿ ಶ್ರೀಮಂತ ಲಚಮು ಚವ್ಹಾಣ ಎಂಬಾತನನ್ನು ವಶಕ್ಕೆ ಪಡೆದು ಕೋರ್ಟಿಗೆ ಹಾಜರು ಪಡೆಸಲಾಗಿದೆ.

ಈ ವೇಳೆ ಅಬಕಾರಿ ನೀರಿಕ್ಷಕರಾದ ಆರತಿ ಖೈನೂರ, ಪೇದೆ ಆರ್.ಕೆ ವಾತಾಪಿ, ಸಿಬ್ಬಂದಿ ಎಸ್.ಸಾತಲಗಾವ ಹಾಗೂ ವಾಹನ ಚಾಲಕ ಎ.ಜೆ ಮನಗೂಳಿ ಇದ್ದರು.




Leave a Reply

Your email address will not be published. Required fields are marked *

error: Content is protected !!