ಬಾಲಕಿ ಮೇಲೆ ಗ್ಯಾಂಗ್ ರೇಪ್..

459

ಉತ್ತರ ಪ್ರದೇಶ: 14 ವರ್ಷದ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಉತ್ತರ ಪ್ರದೇಶದ ಮುಝಫರ್ ನಗರದಲ್ಲಿ ಈ ಒಂದು ಅಮಾನವೀಯ ಘಟನೆ ನಡೆದಿದೆ. ಅತ್ಯಾಚಾರ ಎಸಗಿದ ಕಾಮುಕರು ಬಾಲಕಿಯನ್ನ ಸುಟ್ಟು ಹಾಕಿ ತಮ್ಮ ರಾಕ್ಷಸ ಗುಣವನ್ನ ವಿಜೃಂಭಿಸಿದ್ದಾರೆ.

ಈ ಘಟನೆ ಕಳೆದ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕುಟುಂಬಸ್ಥರು ಕೆಲಸ ಮಾಡ್ತಿದ್ದ ಇಟ್ಟಿಗೆಯ ಗೂಡಿನ ಬಳಿ ಮೃತದೇಹ ಪತ್ತೆಯಾಗಿದೆ.

ಘಟನೆ ಹಿನ್ನೆಲೆ:

ಬಾಲಕಿಯ ತಾಯಿಗೆ ಹುಷಾರಿಲ್ಲದ ಕಾರಣ, 12 ವರ್ಷದ ತಮ್ಮನ್ನ ಆಕೆಯ ಜೊತೆ ಬಿಟ್ಟು ಆಸ್ಪತ್ರೆಗೆ ಹೋಗಿದ್ದಾರೆ. ಈ ವೇಳೆ ಅಲ್ಲಿಯೇ ಕೆಲಸ ಮಾಡ್ತಿದ್ದ ಇಬ್ಬರು ಬಾಲಕಿಯನ್ನು ಕರೆದುಕೊಂಡು ಹೋಗಿ ಈ ಕೃತ್ಯೆ ಎಸಗಿದ್ದಾರೆ ಎನ್ನಲಾಗ್ತಿದೆ.

ಈ ಪ್ರಕರಣ ಸಂಬಂಧ ಇಟ್ಟಿಗೆ ಗೂಡಿನ ಮಾಲೀಕ ಸೇರಿದಂತೆ 6 ಜನರ ಮೇಲೆ ಕೇಸ್ ದಾಖಲಾಗಿದೆ. ಮಗಳನ್ನ ಕಳೆದುಕೊಂಡ ಕುಟುಂಬ ಇದೀಗ ಕಣ್ಣೀರಿನಲ್ಲಿ ಕೈತೊಳೆದುಕೊಳ್ಳುತ್ತಿದೆ. ಅತ್ಯಾಚಾರ ಕೇಸಿಗೆ ಸಂಬಂಧಿಸಿದಂತೆ ಎಲ್ಲಿಯವರೆಗೆ ಕಠಿಣ ಕಾನೂನು ಬರುವುದಿಲ್ಲವೋ ಅಲ್ಲಿಯ ತನಕ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಜೊತೆಗೆ ನಾಗರೀಕ ಸಮಾಜ ಕೈ ಕಟ್ಟಿಕೊಂಡು ಕುಳಿತಷ್ಟು ಇವುಗಳ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತೆ.




Leave a Reply

Your email address will not be published. Required fields are marked *

error: Content is protected !!