ಅಫ್ಘನ್ ಅಧ್ಯಕ್ಷರ ಭಾಷಣ ವೇಳೆ ಬಾಂಬ್ ಬ್ಲಾಸ್ಟ್

586

ಅಂತಾರಾಷ್ಟ್ರೀಯ ಸುದ್ದಿ: ಮೂಲ: ವಾಯ್ಸ್ ಆಫ್ ಅಮೆರಿಕ

ಕಾಬೂಲ್: ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ ಘನಿ ಅವರು ಚುನಾವಣಾ ಪ್ರಚಾರದ ಭಾಷಣದ ಸಂದರ್ಭದಲ್ಲಿ ಆತ್ಮಹುತಿ ಬಾಂಬ್ ಬ್ಲಾಸ್ಟ್ ಆಗಿದೆ. ಇದ್ರಿಂದಾಗಿ ಸುಮಾರು 24 ಜನ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನ ಗಾಯಗೊಂಡಿರುವ ವರದಿಯಾಗಿದೆ.

ಪರ್ವಾನ್ ಚರಿಹಾರನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ನಿಂದ ಸಾಕಷ್ಟು ಸಾವು ನೋವು ಸಂಭವಿಸಿದೆ. ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಲಾಗ್ತಿದೆ. ಸಾವನ್ನಪ್ಪಿದವರಲ್ಲಿ ಮಕ್ಕಳು, ಮಹಿಳೆಯರು ಸಹ ಸೇರಿದ್ದಾರೆ. ಇದರ ನಡುವೆ ಕಾಬೂಲ್ ನಗರದಲ್ಲಿಯೂ ಎರಡು ಕಡೆ ಬಾಂಬ್ ಸ್ಫೋಟಗೊಂಡಿವೆ.

ಈ ತಿಂಗಳ ಅಂತ್ಯದಲ್ಲಿ ಅಫ್ಘಾನಿಸ್ತಾನದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಹೀಗಾಗಿ ಭರ್ಜರಿಯಾಗಿ ಪ್ರಚಾರ ನಡೆಸಲಾಗ್ತಿದೆ. ಇಂತಹ ಟೈಂನಲ್ಲಿ ಬಾಂಬ್ ಸ್ಫೋಟಗೊಳ್ತಿದ್ದು ಮತದಾರರಲ್ಲಿ ಸಾಕಷ್ಟು ಆತಂಕ್ಕೆ ಕಾರಣವಾಗಿದೆ.




Leave a Reply

Your email address will not be published. Required fields are marked *

error: Content is protected !!