8 ಜನ ಪೊಲೀಸರನ್ನ ಕೊಂದ ದುಬೆ ಗ್ಯಾಂಗ್ ಎಲ್ಲಿದೆ?

501

ಪ್ರಜಾಸ್ತ್ರ ಸುದ್ದಿ

ಕಾನ್ಪುರ್: ಇಡೀ ದೇಶವನ್ನ ಬೆಚ್ಚಿಬೀಳಿಸುವ ಘಟನೆ ಶುಕ್ರವಾರ ನಡೆದಿದೆ. ಸುಮಾರು ದರೋಡೆ, ಸುಲಿಗೆ ಸೇರಿದಂತೆ 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿರುವ ವಿಕಾಸ ದುಬೆ ಹಾಗೂ ಆತನ ಗ್ಯಾಂಗ್, ಡಿವೈಎಸ್ಪಿ ಸೇರಿದಂತೆ 8 ಜನ ಪೊಲೀಸ್ ಸಿಬ್ಬಂದಿಯನ್ನ ಹತ್ಯೆ ಮಾಡಿ ಎಸ್ಕೇಪ್ ಆಗಿದೆ. ಹೀಗಾಗಿ ಇವರ ಬಂಧನಕ್ಕೆ ಉತ್ತರ ಪ್ರದೇಶ ಪೊಲೀಸ್ರು ಕಾರ್ಯಾಚರಣೆಗೆ ಇಳಿದಿದ್ದಾರೆ.

ಬಿಕ್ರು ಗ್ರಾಮದಲ್ಲಿ ದುಬೆ ಹಾಗೂ ಅವನ ಟೀಂ ಇರುವುದು ಖಚಿತಪಡಿಸಿಕೊಂಡ ಪೊಲೀಸ್ರು, ಗುರುವಾರ ತಡರಾತ್ರಿ ಶುಕ್ರವಾರ ಬೆಳಗಿನ ಜಾವ 16 ಜನ ಪೊಲೀಸ್ರ ತಂಡ ಹೋಗಿದೆ. ಆಗ ಏಕಾಏಕಿ ಆತನ ತಂಡ ಪೊಲೀಸ್ ಮೇಲೆ ಗುಂಡಿನ ದಾಳಿ ನಡೆಸಿದೆ. ಇದ್ರಿಂದಾಗಿ ಓರ್ವ ಡಿವೈಎಸ್ಪಿ ಸೇರಿ 8 ಜನ ಪೊಲೀಸ್ ಸಿಬ್ಬಂದಿ ಹತ್ಯೆಯಾಗಿದೆ. ದುಬೆ ಬೆಂಗಲಿಗರಿಬ್ಬರ ಹತ್ಯೆಯಾಗಿದೆ.

ಇಲ್ಲಿಂದ ತಪ್ಪಿಸಿಕೊಂಡು ಹೋಗಿರುವ ಮೋಸ್ಟ್ ವಾಟೆಂಡ್ ಕ್ರಮಿನಲ್ ದುಬೆ ಹಾಗೂ ಸಹಚರರು ನೇಪಾಳಕ್ಕೆ ಅಥವಾ ಚಂಬಲ ಕಣಿವೆಗೆ ಹೋಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಹೀಗಾಗಿ ನೇಪಾಳ ಗಡಿ ಭಾಗದ ಲಂಖಿಪುರ ಸೇರಿ ಇತರೆ ಪ್ರದೇಶಗಳಲ್ಲಿ ಹಾಗೂ ಮಧ್ಯಪ್ರದೇಶದ ಚೆಂಬಲ್ ಕಣಿವೆಗೆ ಸಂಬಂಧಿಸಿದ ಜಾಗಗಳನ್ನ ಪೊಲೀಸ್ರು ಬಂದ್ ಮಾಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿರುವ ನಿನ್ನೆಯ ಘಟನೆಯಿಂದ ಸಿಎಂ ಯೋಗಿ ಆದಿತ್ಯನಾಥ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.




Leave a Reply

Your email address will not be published. Required fields are marked *

error: Content is protected !!