ಬಾಡಿ ಶೇಮಿಂಗ್ ಬಗ್ಗೆ ಮೈನಾ ಬ್ಯೂಟಿ ಹೇಳಿದ್ದೇನು?

327

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸೌಥ್ ಸಿನಿ ದುನಿಯಾದ ಸ್ಟಾರ್ ನಟಿಯರ ಲಿಸ್ಟ್ ನಲ್ಲಿ ನಿತ್ಯ ಮನೆನ್ ಸಹ ಒಬ್ಬರು. ಮಲಯಾಳಂ ಮೂಲದ ನಟಿ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ನಟಿ ನಿತ್ಯ ಕನ್ನಡದ ಮೈನಾ ಚಿತ್ರದ ಮೂಲಕ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟರು. ಮೊದಲ ಚಿತ್ರವೇ ಸಕ್ಸಸ್. ಅಲ್ಲಿಂದ ಅವರು ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲೂ ಮಿಂಚಲು ಶುರು ಮಾಡಿದ್ದಾರೆ.

ಇಂಥಾ ಬ್ಯೂಟಿಫುಲ್ ನಟಿ ಇತ್ತೀಚೆಗೆ ದಪ್ಪವಾಗಿದ್ದಾರೆ. ಮೊದ್ಲೇ ಒಂದಿಷ್ಟು ಗುಂಡುಗುಂಡಾಗಿದ್ದ ನಟಿ ಈಗ ಮತ್ತಷ್ಟು ದಪ್ಪವಾಗಿರುವುದಕ್ಕೆ, ಒಂದಿಷ್ಟು ಟ್ರೋಲ್ ಗಳು ಶುರುವಾಗಿವೆ. ಹೀಗಾಗಿ ಈ ಬಗ್ಗೆ ಮಾತ್ನಾಡಿರುವ ನಟಿ ನಿತ್ಯ ಮನೆನ್, ಬಾಡಿ ಶೇಮಿಂಗ್ ಯಾಕೆ ತೆಲೆ ಕೆಡಿಸಿಕೊಳ್ಳಬೇಕು. ಯಾರೂ ನಿಮ್ಮನ್ನ ದಪ್ಪ ಯಾಕೆ ಆದೆ ಎಂದು ಕೇಳುವುದಿಲ್ಲ ಎಂದಿದ್ದಾರೆ.

ದಕ್ಷಿಣ ಭಾರತದ ಎಲ್ಲ ಭಾಷೆ ಮಾತ್ನಾಡುವ ನಿತ್ಯ, ಕಾಮೆಂಟ್ಸ್ ಬಗ್ಗೆ ತೆಲೆ ಕೆಡಿಸಿಕೊಳ್ಳುವುದಿಲ್ಲ. ಅದರಿಂದ ನಮಗೇನು ಆಗಬೇಕಿಲ್ಲ ಎಂದಿದ್ದಾರೆ. ಈ ಮೂಲಕ ದೇಹದ ಬಗ್ಗೆ ಮಾತ್ನಾಡಿರುವವರಿಗೆ ನಿತ್ಯ ತಿರುಗೇಟು ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!