ಪುರಸಭೆ ವತಿಯಿಂದ ವಿಕಲಚೇತನರಿಗೆ ಬೈಕ್ ವಿತರಣೆ

480

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪುರಸಭೆ ವತಿಯಿಂದ ನಾಲ್ಕು ಜನ ವಿಕಲಚೇತನರಿಗೆ ಬೈಕ್ ವಿತರಣೆ ಮಾಡಲಾಗಿದೆ. ಪಟ್ಟಣದ ಜಲಮಂಡಳಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಂ.ಸಿ ಮನಗೂಳಿ ಅವರು ಚಾಲನೆ ನೀಡುವ ಮೂಲಕ ಬೈಕ್ ವಿತರಿಸಲಾಯ್ತು.

2018-19ನೇ ಸಾಲಿನ ಎಸ್ಎಫ್ ಸಿ ಶೇಕಡ 3 ಹಾಗೂ 2019-20ನೇ ಸಾಲಿನ ಶೇ.5ರಷ್ಟು ಅನುದಾನದ ಮೂಲಕ, ಬೈಕ್ ವಿತರಿಸಲಾಗಿದೆ. ಶಿವಾನಂದ ಶೆಂಬೇವಾಡ, ಕಾಶೀಮಸಾಬ ಗುಂದಗಿ, ಸಫಿಯಾ ಬಾಗವಾನ ಹಾಗೂ ಅಕ್ಬರ ಬಾಗವಾನ ಅನ್ನೋ ನಾಲ್ವರಿಗೆ ಬೈಕ್ ವಿತರಿಸಲಾಗಿದೆ.

2018-19ನೇ ಎಸ್ಎಫ್ ಸಿ 2 ಲಕ್ಷ ಹಾಗೂ 2019-20ನೇ ಸಾಲಿನ 60 ಸಾವಿರ ರೂಪಾಯಿ ಅನುದಾನ ಸೇರಿ 2.60 ಲಕ್ಷ ರೂಪಾಯಿ ಹಾಗೂ ಫಲಾನುಭವಿಗಳಿಂದ ಶೇಕಡ 25ರಷ್ಟು ಪಡೆದ 1,07,156 ರೂಪಾಯಿ ಸೇರಿದಂತೆ ಒಟ್ಟು 3,67,156 ರೂಪಾಯಿಗಳ ಮೂಲಕ 4 ಬೈಕ್ ವಿತರಣೆ ಮಾಡಲಾಗಿದೆ.

ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಹಿರಿಯ ಆರೋಗ್ಯ ನಿರೀಕ್ಷಕ ಅಭಿಷೇಕ ಪಾಂಡೆ, ವಿಷಯ ನಿರ್ವಾಹಕ ಶಿವಾಜಿ ಕೊಡಗೆ, ವಾಟರ್ ಸಪ್ಲೈ ಸೂಪರ್ ವೈಸರ್ ಅಬ್ಬಾಸಅಲಿ ಕಾಕಂಡಕಿ ಹಾಗೂ ಪುರಸಭೆ ಸದಸ್ಯರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!