ಗ್ಯಾಸ್.. ಗಾಡಿ ಎಣ್ಣೆ ಆಯ್ತು.. ಈಗ ಅಡುಗೆ ಎಣ್ಣೆ ಬೆಲೆ ಏರಿಕೆ

280

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕಳೆದ ಹದಿನೈದು ದಿನದೊಳಗೆ ಎರಡು ಬಾರಿ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಅದು ಬರೋಬ್ಬರಿ 100 ರೂಪಾಯಿ. ಇದ್ರಿಂದಾಗಿ ಜನರು ಕಂಗಾಲಾಗಿದ್ದಾರೆ. ಇದು ಸಾಲದಂತ ಈಗ ಅಡುಗೆ ಎಣ್ಣೆ ಬೆಲೆನೂ ಏರಿಕೆ ಮಾಡಲಾಗಿದೆ.

ಇನ್ನು ಪೆಟ್ರೋಲ್, ಡೀಸೆಲ್ ಬೆಲೆ ಬಗ್ಗೆ ಕೇಳುವುದೇ ಬೇಡ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ 1 ಲೀಟರ್ ಪೆಟ್ರೋಲ್ 100ರ ಸಮೀಪ ಬಂದಿದೆ. ಡೀಸೆಲ್ ಸಹ ಇದರ ಜೊತೆಗೆ ಪೈಪೋಟಿ ನಡೆಸಿದೆ. ಇದ್ರಿಂದಾಗಿ ಜನಸಾಮಾನ್ಯರ ಜೇಬಿಗೆ ಕೇಂದ್ರ ಸರ್ಕಾರ ಭರ್ಜರಿಯಾಗಿ ಕತ್ತರಿ ಹಾಕ್ತಿದೆ.

ಇಷ್ಟೆಲ್ಲ ಸಾಲದು ಅಂತ ಈಗ ಅಡುಗೆ ಎಣ್ಣೆ ಬೆಲೆಯೂ ಏರಿಕೆ ಮಾಡಲಾಗಿದೆ. ಅಡುಗೆ ಎಣ್ಣೆ ಬೆಲೆಯಲ್ಲಿ ಶೇಕಡ 35 ರಿಂದ 45ರಷ್ಟು ಏರಿಕೆಯಾಗಿದೆ. ಹೀಗಾಗಿ ಪಾಮ್ ಎಣ್ಣೆಯ ಬೆಲೆಯ 1 ಕೆಜಿಗೆ 130ರಿಂದ 140ರ ತನಕ ಬಂದಿದೆ. ಆರು ತಿಂಗಳ ಹಿಂದೆ 65-70 ರೂಪಾಯಿ ಇತ್ತು. ಬಳಿಕ ಒಮ್ಮೆಲೆ 100 ರೂಪಾಯಿ ಆಯ್ತು. ಈಗ 130-140 ಕೆಜಿ ಆಗಿದೆ.




Leave a Reply

Your email address will not be published. Required fields are marked *

error: Content is protected !!