ದೇವರನ್ನೇ ಮದುವೆಯಾದ ಯುವತಿ!

196

ಪ್ರಜಾಸ್ತ್ರ ಸುದ್ದಿ

ರಾಜಸ್ಥಾನ: ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಹಲವು ವಿಚಿತ್ರ ಕಾರಣಗಳಿಗೆ ಸುದ್ದಿಯಾಗುತ್ತಿವೆ. ಸಲಿಂಗಿಗಳ ಮದುವೆ, ಹುಡುಗಿ-ಹುಡುಗಿಯರ ಮದುವೆ. ಹುಡುಗಿಗಾಗಿ ಲಿಂಗತ್ವ ಬದಲಾವಣೆ ಮಾಡಿಕೊಳ್ಳುವುದು, ಮರಕ್ಕೆ ಮದುವೆಯಾಗುವುದು, ತನ್ನನ್ನೇ ತಾನು ವಿವಾಹ ಆಗುವುದನ್ನು ನೋಡಿದ್ದೇವೆ. ಕೇಳಿದ್ದೇವೆ. ಈಗ ರಾಜಸ್ಥಾನದಲ್ಲಿ 30 ವರ್ಷದ ಯುವತಿಯೊಬ್ಬಳು ದೇವರನ್ನೇ ಮದುವೆಯಾಗಿದ್ದಾಳೆ.

ವೈವಾಹಿಕ ಜೀವನದ ಜಂಜಾಟ, ಸಣ್ಣಪುಟ್ಟ ಕಾರಣಕ್ಕೆ ಜಗಳ, ನೂರಾರು ಸಮಸ್ಯೆಗಳನ್ನು ಮಹಿಳೆಯರು ಅನುಭವಿಸುತ್ತಿದ್ದಾರೆ. ಹೀಗಾಗಿ ನಾನು ದೇವರನ್ನೇ ಮದುವೆಯಾಗುವ ನಿರ್ಧಾರ ತೆಗೆದುಕೊಂಡೆ ಅಂತಾಳೆ ಜೈಪುರದ ನರಸಿಂಗಪುರದ ನಿವಾಸಿ ಪೂಜಾ. ಹೀಗಾಗಿ ದೇವರಾದ ವಿಷ್ಣುವಿನೊಂದಿಗೆ ಕಳೆದ ಡಿಸೆಂಬರ್ 8ರಂದು ತುಳುಸಿ ವಿವಾಹ ಆಗಿದ್ದಾಳೆ.

ನಿವೃತ್ತ ಬಿಎಸ್ಎಫ್ ಯೋಧರ ಪುತ್ರಿಯಾದ ಪೂಜಾಳ ಈ ಮದುವೆ ಸುಮಾರು 300ಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಆಗಿದೆ. ಮಗಳ ನಿರ್ಧಾರವನ್ನು ತಂದೆ, ತಾಯಿ ಇಬ್ಬರು ಒಪ್ಪಿಕೊಂಡಿದ್ದಾರೆ. ನಿತ್ಯ ಮನೆಯಲ್ಲಿ ವಿಷ್ಣುನನ್ನು ಪೂಜಿಸುತ್ತೇನೆ. ಆತನಿಗೆ ಪ್ರಿಯವಾದ ಅಡುಗೆ ಮಾಡಿ ನೈವೇದ್ಯ ಅರ್ಪಿಸುತ್ತೇನೆ ಅಂತಾಳೆ ಪೂಜಾ. 12ನೇ ಶತಮಾನದ ಶರಣ, ಶರಣೆಯರ ಕಾಲಘಟ್ಟದಲ್ಲಿ ವಚನಗಾರ್ತಿ ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನೇ ನನ್ನ ಪತಿ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.




Leave a Reply

Your email address will not be published. Required fields are marked *

error: Content is protected !!