ಯಂಕಂಚಿಯಲ್ಲಿ ‘ಸ್ವಚ್ಛ ಭಾರತ ಮಿಷನ್’ಗೆ ಚಾಲನೆ

534

ಸಿಂದಗಿ: ಜಿಲ್ಲಾ ಪಂಚಾಯ್ತಿ ವಿಜಯಪುರ, ತಾಲೂಕು ಪಂಚಾಯ್ತಿ ಸಿಂದಗಿ ಜಾಗೂ ಗ್ರಾಮ ಪಂಚಾಯ್ತಿ ಯಂಕಂಚಿ ಇವರ ಸಂಯುಕ್ತಾಶ್ರಯದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸ್ವಚ್ಛ ಮೇವ ಜಯತೇ ಹಾಗೂ ಜಲಾಮೃತ ಕಾರ್ಯಕ್ರಮವನ್ನ ಯಂಕಂಚಿಯಲ್ಲಿ ನಡೆಸಲಾಯ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಜಯಪುರ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳು, ವಿಜಯಪುರ ಜಿಲ್ಲೆಯಲ್ಲಿ ಒಟ್ಟು 213 ಗ್ರಾಮ ಪಂಚಾಯತಿಗಳಿವೆ. ಈ ಎರಡು ಕಾರ್ಯಕ್ರಮಗಳ ಮುಖಾಂತರ ಈ ತಿಂಗಳು ಪ್ರತಿ ಗ್ರಾಮ ಪಂಚಾಯತಿಗೆ ಕನಿಷ್ಠ 1000 ರಂತೆ ಸಸಿಗಳನ್ನ ನೆಡಲು ಯೋಜನೆ ಹಾಕಿಕೊಂಡಿದ್ದೆವೆ ಅಂತಾ ಹೇಳಿದ್ರು. ಈ ತಿಂಗಳ ಅಂತ್ಯದಲ್ಲಿ ಜಿಲ್ಲೆಯಲ್ಲಿ 2,13,000 ಸಸಿಗಳನ್ನು ನೆಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೆವೆ. ಅವುಗಳನ್ನು ಪೋಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೆ ಇದೆ ಅಂತಾ ತಿಳಿಸಿದ್ರು.

ಕಾರ್ಯಕ್ರಮಕ್ಕೂ ಮುನ್ನ 500ಕ್ಕೂ ಹೆಚ್ಚು ಮಕ್ಕಳಿಂದ ಸ್ವಾಭಿಮಾನಕ್ಕಾಗಿ ಸ್ವಚ್ಛತೆ ಘೋಷಣೆಯಡಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶ್ರೀಮತಿ ಭೌರಮ್ಮ ಬಿರಾದಾರ, ಮಹೇಶ ಬಗಲಿ, ಆದಣ್ಣ ಹೊಸಮನಿ, ಸ್ವಚ್ಚ ಭಾರತ ಅಭಿಯಾನ ಯೋಜನೆಯ ತಾಲೂಕು ಸಂಯೋಜಕ ಕಲ್ಲಪ್ಪ ನಂದರಗಿ ಸೇರಿದಂತೆ ತಾಲೂಕು ಪಂಚಾಯತ ಮತ್ತು ಗ್ರಾಮ ಪಂಚಾಯತಿಯ ಸದಸ್ಯರು ಸಿಬ್ಬಂದಿ ಹಾಜರಿದ್ದರು.

ಕಾರ್ಯಕ್ರಮವನ್ನ ಸಿದ್ದಣ್ಣ ಪೂಜಾರಿ ನಿರೂಪಿಸಿದರು. ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ ಸ್ವಾಗತಿಸಿದರು. ಸ್ವಚ್ಚ ಭಾರತ ಅಭಿಯಾನ ಯೋಜನೆಯ ತಾಲೂಕು ಸಂಯೋಜಕ ಕಲ್ಲಪ್ಪ ನಂದರಗಿ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!