ಹಸೆಮಣೆ ಏರಿಬೇಕಾದ ಸಿಂದಗಿ ತಾಲೂಕಿನ ಯುವಕ ಮಸಣ ಸೇರಿದ…

2794

ಸಿಂದಗಿ: ಹೊಸ ಟಿಸಿ ಅಳವಡಿಸುವಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ತಾಲೂಕಿನ ಯಂಕಂಚಿ ಗ್ರಾಮದಲ್ಲಿ ಸಂಜೆ ಸುಮಾರು 6 ಗಂಟೆಗೆ ನಡೆದಿದೆ. ಪುರದಾಳ ಗ್ರಾಮದ ನಿವಾಸಿ 25 ವರ್ಷದ ಬಸನಗೌಡ  ಬಿರಾದಾರ ಮೃತ ವ್ಯಕ್ತಿಯಾಗಿದ್ದಾನೆ.

ಗ್ರಾಮದ ನಿವಾಸಿ ಮೋಹನ ಕುಂಬಾರ ಎಂಬುವರ ಜಮೀನನಲ್ಲಿ ಟಿಸಿಗೆ ಸಂರ್ಪಕ ನೀಡುವಾಗ ನಡೆದ ಅವಘಡದಿಂದ ಬಸನಗೌಡ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಸಿಂದಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ತಾಲೂಕು ಆಸ್ಪತ್ರೆಗೆ ಮೃತದೇಹವನ್ನ ರವಾನಿಸಲಾಗಿದೆ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮೃತ ಯುವಕ

ಘಟನೆ ಹಿನ್ನೆಲೆ:

ಯಂಕಂಚಿ ಗ್ರಾಮದಲ್ಲಿ ಮೋಹನ ಕುಂಬಾರ ಎಂಬುವರ ಜಮೀನದಲ್ಲಿ ಹೊಸದಾಗಿ ಟಿಸಿ ಕುಡಿಸಲು ಕೆಇಬಿ ಕಂಟ್ರಾಕ್ಟರ್ ಚಂದ್ರಕಾಂತ ಬೂದಿಹಾಳ ಎಂಬುವರಿಗೆ ಕೊಡಲಾಗಿದೆ. ಇವರ ಬಳಿ ಕೆಲಸ ಮಾಡ್ತಿದ್ದ ಕಾರ್ಮಿಕ ಬಸನಗೌಡ ಶಿವನಗೌಡ ಬಿರಾದಾರ, ಮಲಿಕಸಾಬ ಅಮೀನಸಾಬ ಡೋಣೂರ ಅವರ ಹೊಲದಲ್ಲಿರುವ ಟಿಸಿಯಿಂದ ಸಂಪರ್ಕ ಕೊಡುವ ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದೆ. ಲೈನ್ ಮನ್ ಎಸ್ಕೇಪ್ ಆಗಿದ್ದಾನೆ ಅನ್ನೋದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಕೆಇಬಿಯ ಎಇಇ ಸ್ಥಳಕ್ಕೆ ಹೋದಾಗ ಸ್ಥಳಯರೊಂದಿಗೆ ಮಾತಿನ ಚಕಮಕಿ ನಡೆದಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ? ಗುತ್ತಿಗೆದಾರನ ನಿರ್ಲಕ್ಷ್ಯವೇ? ಯಾರು ಹೊಣೆ ಎಂದು ಗ್ರಾಮಸ್ಥರು ಪ್ರಶ್ನೆ ಮಾಡ್ತಿದ್ದಾರೆ.

ಹಸಮಣೆ ಏರಬೇಕಾಗಿದ್ದ ಯುವಕ:

ವಿಧಿ ಕೆಲವೊಮ್ಮೆ ಹೇಗೆ ಆಟವಾಡುತ್ತೆ ಅನ್ನೋದು ಗೊತ್ತಾಗುವುದಿಲ್ಲ. ಡಿವಿಜಿ ಅವರ ಸಾಲುಗಳು ಹೀಗಿವೆ.. ಬದುಕು ಜಟಕಾ ಬಂಡಿ. ವಿಧಿ ಅದರ ಸಾಹೇಬ್. ಮದುವೆಗೋ ಮಸಣಕೋ ಹೋಗೆಂದ ಕಡೆಗೆ ಎಂದು.. ಇಲ್ಲಿ ಅದೆ ನಡೆದಿದೆ. ಇನ್ನು ಕೆಲ ದಿನಗಳಲ್ಲಿಯೇ ಹಸಮಣೆ ಏರಬೇಕಾಗಿದ್ದ ಬಸನಗೌಡ ಬಿರಾದಾರ, ಇಂದು ನಡೆದ ಅನಾಹುತದಲ್ಲಿ ಸಾವನ್ನಪ್ಪಿದ್ದಾನೆ.

ಮಗನನ್ನ ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಮದ್ವೆ ಮಾಡಿಕೊಂಡು ಹೊಸ ಜೀವನ ನಡೆಸಬೇಕಿದ್ದ ಯುವಕ ಪ್ರಾಣ ಕಳೆದುಕೊಂಡಿದ್ದು ಎಲ್ಲರ ಕಣ್ಣಾಲೆಗಳನ್ನ ತುಂಬಿಸಿವೆ. ಇದೀಗ ಪುರದಾಳ ಗ್ರಾಮದಲ್ಲಿ ನೀರವಮೌನ ಆವರಿಸಿದ್ದು, ವಿಧಿಯಾಟಕ್ಕೆ ಹಿಡಿ ಶಾಪ ಹಾಕ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!