ಮದ್ಯ ಮಾರಾಟದ ವಿರುದ್ಧ ಹೊನ್ನಳ್ಳಿಯಲ್ಲಿ ಬೃಹತ್ ಪ್ರತಿಭಟನೆ

1233

ಸಿಂದಗಿ: ಕರೋನಾ ಲಾಕ್ ಡೌನ್ ನಿಂದ ಕಳೆದ ಒಂದೂವರೆ ತಿಂಗಳಿನಿಂದ ಮದ್ಯ ಮಾರಾಟಕ್ಕೆ ನಿಷೇಧ ಹೇರಿದ್ದ ಸರ್ಕಾರ, ಇದೀಗ ಅನುಮತಿ ನೀಡಲಾಗಿದೆ. ಆದ್ರೆ, ಇದಕ್ಕೆ ರಾಜ್ಯದ ಹಲವು ಕಡೆ ವಿರೋಧ ವ್ಯಕ್ತವಾಗಿದೆ. ಅದೇ ರೀತಿ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಹೊನ್ನಳ್ಳಿಯಲ್ಲಿ ಮದ್ಯ ಮಾರಾಟ ನಿಷೇಧಕ್ಕಾಗಿ ಬೃಹತ್ ಪ್ರತಿಭಟನೆ ಮಾಡಲಾಗಿದೆ.

ಇಡೀ ಗ್ರಾಮದ ಮಹಿಳೆಯರು ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಪೊರಕೆ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ತಾಲೂಕಿನಲ್ಲಿ ಮಾದರಿ ಗ್ರಾಮವನ್ನಾಗಿ ಮಾಡೋಣವೆಂದು ಮಹಿಳೆಯರು ಪಣತೊಟ್ಟು ಹೋರಾಟಕ್ಕೆ ಮುಂದಾಗಿದ್ದಾರೆ. ಗ್ರಾಮದಲ್ಲಿ ವೈನ್ ಶಾಪ್ ಇಲ್ಲ. ಆದ್ರೆ, ಕಿರಾಣಿ ಅಂಗಡಿ, ಪಾನ್ ಶಾಪ್ ನಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗ್ತಿದೆ. ಒಬ್ಬ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದಾನೆ ಎಂದು  ಗ್ರಾಮಸ್ಥರು ಹೇಳಿದ್ದಾರೆ. ಹೀಗಾಗಿ ಮದ್ಯ ನಿಷೇಧ ಹೇರಬೇಕೆಂದು ಇಂದು ನೂರಾರು ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಇವತ್ತು ತಹಶೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಿ, ಸರ್ಕಾರದ ನಿಯಮದಂತೆ ಕಟ್ಟುನಿಟ್ಟಾಗಿ ಪಾಲನೆ ಮಾಡಲು ಹೇಳಲಾಗಿದೆ. ಒಬ್ಬರಿಗೆ ಇಂತಿಷ್ಟು ಮದ್ಯದ ಬಾಟಲ್ ಮಿತಿ ಹೇರಲಾಗಿದೆ. ಹೀಗಾಗಿ ಎಲ್ಲಿಯೂ ಹೆಚ್ಚಿಗೆ ಕೊಡುವಂತಿಲ್ಲ. ಹೊನ್ನಳ್ಳಿಯಲ್ಲಿ ನಡೆದ ಪ್ರತಿಭಟನೆ ನಮ್ಮ ಗಮನಕ್ಕೆ ಬಂದಿಲ್ಲ. ಹೀಗೆ ಯಾರಾದ್ರೂ ಮಾರಾಟ ಮಾಡ್ತಿದ್ರೆ ಅವರ ವಿರುದ್ಧ ಕಠಿಣ ಕ್ರಮಗಳನ್ನ ತೆಗೆದುಕೊಳ್ಳಲಾಗುತ್ತೆ.

ಮುಜಾವರ, ಅಬಕಾರಿ ಪಿಎಸ್ಐ

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳಬೇಕಾಗಿದೆ. ಇಲ್ಲದೆ ಹೋದ್ರೆ ಇನ್ನಷ್ಟು ಜೀವಗಳು ಬಲಿಯಾಗಲಿವೆ.




Leave a Reply

Your email address will not be published. Required fields are marked *

error: Content is protected !!