ಆಕ್ಟ್-1978 ಚಿತ್ರಕ್ಕೆ ಸ್ಟಾರ್ಸ್ ಬೆಂಬಲ

303

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಿರ್ದೇಶಕ ಮಂಸೂರೆ ಆ್ಯಕ್ಷನ್ ಕಟ್ ಹೇಳಿರುವ ಆಕ್ಟ್-1978 ಚಿತ್ರವನ್ನ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಟಾಕ್ ನಡೆದಿದೆ. ಲಾಕ್ ಡೌನ್ ಬಳಿಕ ತೆರೆಗೆ ಬಂದಿರುವ ಚಿತ್ರವನ್ನ ಜನರು ಮೆಚ್ಚಿಕೊಂಡಿದ್ದಾರೆ.

ಈ ಚಿತ್ರವನ್ನ ಸ್ಟಾರ್ ನಟರಾದ ಸುದೀಪ, ದರ್ಶನ, ಪುನೀತರಾಜಕುಮಾರ, ಶ್ರೀಮುರುಳಿ, ದುನಿಯಾ ವಿಜಿ ಬೆಂಬಲ ಸೂಚಿಸಿದ್ದಾರೆ. ಇದೀಗ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ ದೇವರಾಜ ಬೆಂಬಲ ಸೂಚಿಸಿದ್ದಾರೆ. ಚಿತ್ರಕಥೆ ಬಗ್ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸರ್ಕಾರಿ ಕಚೇರಿಯಲ್ಲಿ ಸಾಮಾನ್ಯ ಜನರಿಗೆ ಹೇಗೆಲ್ಲ ಆಟವಾಡಿಸ್ತಿದ್ದಾರೆ ಅನ್ನೋದರ ಕಥೆಯನ್ನ ಹೊಂದಿದ್ದು, ಸಕ್ಸಸ್ ಫುಲ್ ಆಗಿ ಓಡ್ತಿದೆ.

ನಟಿ ಯಜ್ಞಾ ಶೆಟ್ಟಿ, ನಟ ಸಂಚಾರಿ ವಿಜಯ, ನಿರಂಜನ ದೇಶಪಾಂಡೆ, ಸುಧಾ ಬೆಳವಾಡಿ, ಪ್ರಮೋದ ಶೆಟ್ಟಿ ತಾರಾಗಣ ಇರುವ ಚಿತ್ರವನ್ನ ಜನರು ಮೆಚ್ಚಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!