ಬ್ರೇಕಿಂಗ್ ನ್ಯೂಸ್: ಆಲಮೇಲ ಬಳಿ ಬೈಕ್ ಅಪಘಾತಕ್ಕೆ ಓರ್ವ ಸಾವು

446

ಪ್ರಜಾಸ್ತ್ರ ಸುದ್ದಿ

ಆಲಮೇಲ: ವಿಜಯಪುರ ಜಿಲ್ಲೆಯ ಆಲಮೇಲ-ಸಿಂದಗಿ ರಾಜ್ಯ ಹೆದ್ದಾರಿ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಸಂಭವಿಸಿದೆ. ಈ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಮೃತನನ್ನ ಮುಸ್ತಾಕ ಕುತ್ಬುದ್ದೀನ ಬಂಕಲಗಿ ಎಂದು ಹೇಳಲಾಗ್ತಿದೆ.

ಆಲಮೇಲ ಪಟ್ಟಣದ 22 ವರ್ಷದ ಮುಸ್ತಾಕ ಕುತ್ಬುದ್ದೀನ ಬಂಕಲಗಿ ಮೃತಪಟ್ಟಿದ್ದು ತಂದೆಗೆ ಗಂಭೀರ ಗಾಯಗಳಾಗಿವೆ. ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಮತ್ತೋರ್ವ ಬೈಕ್ ಸವಾರನನ್ನ ವಶಕ್ಕೆ ಪಡೆಯಲಾಗಿದೆ. ಆಲಮೇಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!