ಪಂಜಾಬ್ ಬಳಿಕ ಗೋವಾ ಸಿಎಂ ಅಭ್ಯರ್ಥಿ ಘೋಷಿಸಿದ ಆಪ್

516

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಪಂಜಾಬ್ ಆಪ್ ಸಿಎಂ ಅಭ್ಯರ್ಥಿಯಾಗಿ ಸಂಸದ ಭಗವಂತ್ ಮನ್ ಅವರನ್ನು ಆಯ್ಕೆ ಮಾಡಿದ ಬೆನ್ನೆಲ್ಲೇ ಇದೀಗ ಗೋವಾ ಸಿಎಂ ಅಭ್ಯರ್ಥಿಯನ್ನು ಆಪ್ ಘೋಷಿಸಿದೆ. ದೆಹಲಿ ಸಿಎಂ ಹಾಗೂ ಆಪ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಕೇಜ್ರಿವಾಲ್ ಜೊತೆಗೆ ಗೋವಾ ರಾಜ್ಯ ಘಟಕದ ಅಧ್ಯಕ್ಷರು ಮಂಗಳವಾರ ಸಂಜೆ ಚರ್ಚೆ ನಡೆಸಿದ್ದರು.

ಈ ಬುಧವಾರ ಮಾಧ್ಯಮಗೋಷ್ಠಿ ನಡೆಸಿದ ಅವರು, ಖ್ಯಾತ ನ್ಯಾಯವಾದಿ ಅಮಿತ್ ಪಾಲೇಕರ್ ಅವರನ್ನು ಆಪ್ ಸಿಎಂ ಅಭ್ಯರ್ಥಿಯೆಂದು ಘೋಷಿಸಿದ್ದಾರೆ. ಸ್ಥಳೀಯ ನಾಯಕರೊಂದಿಗೆ ಚರ್ಚೆ ನಡೆಸಿದ ಬಳಿಕ ಕೇಜ್ರಿವಾಲ್ ಪಾಲೇಕರ್ ಅವರ ಹೆಸರನ್ನು ಘೋಷಿಸಿದರು.

ಫೆಬ್ರವರಿ 14ರಂದು ಉತ್ತಾರಖಂಡ ಹಾಗೂ ಗೋವಾದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 20ರಂದು ಪಂಜಾಬಿನಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 27 ಹಾಗೂ ಮಾರ್ಚ್ 3ರಂದು ಮಣಿಪುರದಲ್ಲಿ, ಫೆಬ್ರವರಿ 10, 14, 20, 23, ಮಾರ್ಚ್ 3 ಹಾಗೂ 7ರಂದು ಉತ್ತರ ಪ್ರದೇಶದಲ್ಲಿ ಮತದಾನ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!