ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಕಾಲಿವುಡ್ ನಟಿ ಓವಿಯಾ ವಿರುದ್ಧ ತಮಿಳುನಾಡು ಬಿಜೆಪಿ ದೂರು ನೀಡಿದೆ. ಬಿಜೆಪಿ ಕಾನೂನು ವಿಭಾಗ ಸೈಬರ್ ಕ್ರೈಂಗೆ ದೂರು ನೀಡಿದ್ದು, ನಟಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದೆ. ಭಾನುವಾರ ಪ್ರಧಾನಿ ಮೋದಿ ತಮಿಳುನಾಡಿಗೆ ಭೇಟಿ ನೀಡಿ, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ರು.
ಮೋದಿ ಆಗಮನ ವಿರೋಧಿಸಿ ತಮಿಳುನಾಡಿನಲ್ಲಿ ಹಲವಾರು ಜನರು ಟ್ವೀಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಗೋ ಬ್ಯಾಕ್ ಮೋದಿ ಎಂದು ಬರೆದಿದ್ದಾರೆ. ಅದೆ ರೀತಿ ನಟಿ ಓವಿಯಾ ಸಹ ಗೋಬ್ಯಾಕ್ ಮೋದಿ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಕಾನೂನು ವಿಭಾಗ ದೂರ ದಾಖಲಿಸಿದೆ.