ಸಚಿವ ಕತ್ತಿ ಬಿಪಿಎಲ್ ಕಾರ್ಡ್ ಹೇಳಿಕೆ ವಿರುದ್ಧ ಜನಾಕ್ರೋಶ

258

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಬೆಲೆ ಏರಿಕೆ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಜನರು ಕಿಡಿ ಕಾರುತ್ತಿರುವ ಹೊತ್ತಿನಲ್ಲಿ ಆಹಾರ ಖಾತೆ ಸಚಿವ ಉಮೇಶ ಕತ್ತಿ ನೀಡಿರುವ ಬಿಪಿಎಲ್ ಕಾರ್ಡ್ ಹೇಳಿಕೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಮನೆಯಲ್ಲಿ ಟಿವಿ, ಫ್ರಿಡ್ಜ್, ಬೈಕ್ ಇದ್ದವರು ಬಿಪಿಎಲ್ ಕಾರ್ಡ್ ವಾಪಸ್ ಮಾಡಬೇಕು ಎಂದಿದ್ದಾರೆ.

ಸರ್ಕಾರಿ, ಅರೆ ಸರ್ಕಾರಿ ನೌಕರರು, ವಾರ್ಷಿಕ 1.20 ಲಕ್ಷಕ್ಕಿಂತ ಹೆಚ್ಚು ವರಮಾನ ಇರುವವರು ಸಹ ಮಾರ್ಚ್ 31ರೊಳಗೆ ಬಿಪಿಎಲ್ ಕಾರ್ಡ್ ವಾಪಸ್ ಮಾಡಲು ಗಡವು ನೀಡಿದ್ದಾರೆ. ನಿಗದಿತ ಸಮಯದಲ್ಲಿ ಕಾರ್ಡ್ ವಾಪಸ್ ಮಾಡದಿದ್ರೆ ಆಧಾರ್ ಕಾರ್ಡ್ ಆಧಾರದ ಮೇಳೆ ಸಮೀಕ್ಷೆ ನೀಡಿ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುವುದು. ಅಲ್ದೇ, ಅವರಿಗೆ ದಂಡದ ಜೊತೆಗೆ ಶಿಕ್ಷೆ ನೀಡಲಾಗುವುದು ಎಂದು ಸಚಿವ ಕತ್ತಿ ಹೇಳಿದ್ದಾರೆ.

ಸಚಿವ ಕತ್ತಿ ಹೇಳಿಕೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಟಿವಿ, ಫ್ರಿಡ್ಜ್, ಬೈಕ್ ಇದ್ದವರೆಲ್ಲ ಶ್ರೀಮಂತರು ಅನ್ನೋದಾದ್ರೆ, ಲಕ್ಷಾಂತರ ರೂಪಾಯಿ ಕಾರು, ಕೋಟ್ಯಾಂತರ ರೂಪಾಯಿ ಮನೆ, ಸ್ಕೂಲ್, ಕಾಲೇಜು, ಉದ್ಯಮ ನಡೆಸುವ ರಾಜಕಾರಣಿಗಳು ಯಾಕೆ ಬೇಕು? ಇವರೆಲ್ಲ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ಲಕ್ಷಾಂತರ ರೂಪಾಯಿ ಆಸ್ತಿ ಹೊಂದಿದ್ರೆ ಅಂಥವರು ಚುನಾವಣೆಯಲ್ಲಿ ನಿಲ್ಲುವಂತಿಲ್ಲವೆಂದು ಆದೇಶ ಹೊರಡಿಸಿ. ಜನರು ತಮ್ಮ ಸ್ವಂತ ದುಡಿಮೆಯಲ್ಲಿ ಟಿವಿ, ಬೈಕ್ ಖರೀದಿಸಿದ್ದಾರೆ ಹೊರ್ತು ರಾಜಕಾರಣಿಗಳಂತೆ ಅಕ್ರಮ ಸಂಪಾದನೆ ಮಾಡ್ತಿಲ್ಲವೆಂದು ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!