ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ನ ಜೋಡಿಯೊಂದು ಪ್ರೇಮಿಗಳ ದಿನದಂದು ಸಪ್ತಪದಿ ತುಳಿದಿದೆ. ಯೆಸ್, ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ ಜೋಡಿಯ ವಿವಾಹ ಭಾನುವಾರ ನೆರವೇರಿತು. ಲವ್ ಮಾಕ್ಟೇಲ್ ಚಿತ್ರದ ಮೂಲಕ ಮ್ಯಾಜಿಕ ಮಾಡಿದ ಜೋಡಿ ಸಪ್ತಪದಿ ತುಳದಿದೆ.
ಶನಿವಾರ ಸಂಜೆ ಅರಿಶಿಣ ಶಾಸ್ತ್ರ ನೆರವೇರಿತು. ಭಾನುವಾರ ಫೆ.14ರಂದು ಪ್ರೇಮಿಗಳು ಸಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ಯಾಂಡಲ್ ವುಡ್ ಜೋಡಿಗೆ ಎಲ್ಲ ಸಿನಿ ಗಣ್ಯರು ಶುಭ ಕೋರಿದ್ದಾರೆ. ನಮ್ ದುನಿಯಾ ನಮ್ ಸ್ಟೈಲ್, ಚಾರ್ಲಿ ಸಿನಿಮಾದಲ್ಲಿ ನಟಿಸಿದ್ದ ಜೋಡಿ, ಲವ್ ಮಾಕ್ಟೇಲ್ ಚಿತ್ರದ ವೇಳೆ ತಮ್ಮ ಪ್ರೀತಿಯನ್ನ ಬಹಿರಂಗ ಪಡಿಸಿತ್ತು.