ಯಶಸ್ವಿಯಾದ ವಿದ್ಯಾರ್ಥಿಗಳ ಫೋನ್ ಇನ್ ಕಾರ್ಯಕ್ರಮ

277

ಪ್ರಜಾಸ್ತ್ರ ಸುದ್ದಿ

ಧಾರವಾಡ: ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಾರ್ಯಾಲಯದಲ್ಲಿ ಆಯೋಜಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಲಾಯ್ತು. ಧಾರವಾಡ ಶಹರ ವ್ಯಾಪ್ತಿಯ ಶಾಲೆಗಳ ವಿವಿಧ ವಿಷಯದ 15ಕ್ಕೂ ಹೆಚ್ಚು ಸಂಪನ್ಮೂಲ ಶಿಕ್ಷಕರು ಪೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳ ಗೊಂದಲ ಪರಿಹರಿಸಿದರು.

 ಧಾರವಾಡ ಶಹರ ವ್ಯಾಪ್ತಿಯಲ್ಲದೆ ಧಾರವಾಡ ಜಿಲ್ಲೆಯ ಎಲ್ಲಾ ತಾಲೂಕಿನ ಸುಮಾರು 200ಕ್ಕೂ ಹೆಚ್ಚು ಮಕ್ಕಳು ದೂರವಾಣಿ ಕರೆ ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಂಡರು.

ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು:

ಅತೀ ಕಡಿಮೆ ಅವಧಿಯಲ್ಲಿ ಎಲ್ಲಾ ವಿಷಯಗಳ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಒತ್ತಡ ಕಡಿಮೆ ಮಾಡಿಕೊಂಡು ಓದುವುದು ಹೇಗೆ?  ಆನ್ ಲೈನ್ ತರಗತಿಯಿಂದ ನಮಗೆ ಪಾಠಗಳು ಸಂಪೂರ್ಣ ಮನದಟ್ಟು ಆಗಿಲ್ಲ. ಅವುಗಳನ್ನು ಹೇಗೆ ಮನದಟ್ಟು ಮಾಡಿಕೊಳ್ಳಬೇಕು? ಎಸ್ಎಸ್ಎಲ್ ಸಿ ಸಿಲ್ಯಾಬಸ್ ನಲ್ಲಿ ಏನಾದರೂ ಕಡಿತ ಮಾಡಲಾಗಿದೆಯೇ? ಗಣಿತ, ವಿಜ್ಞಾನ ಸೇರಿದಂತೆ ಕೆಲ ವಿಷಯಗಳಲ್ಲಿನ ತಮ್ಮ ಗೊಂದಲಕ್ಕೆ ವಿದ್ಯಾರ್ಥಿಗಳು ಕರೆ ಮಾಡಿ ಪರಿಹಾರ ಕಂಡುಕೊಂಡರು.

ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎಲ್.ಹಂಚಾಟೆ, ಬಿಇಓ ಎ.ಎ.ಖಾಜಿ,  ಜಿ.ಎನ್.ಮಠಪತಿ ಮಾತ್ನಾಡಿ ಎಸ್ಎಸ್ಎಲ್ ಸಿ ಮಕ್ಕಳಿಗೆ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸುವಂತೆ ಸಲಹೆ ನೀಡಿದರು. ಡಿವೈಪಿಸಿಗಳಾದ  ಎಸ್.ಎಂ ಹುಡೇದಮನಿ, ಪ್ರಮೋದ ಮಹಾಲೆ, ಪೂರ್ಣಿಮಾ ಮುಕ್ಕುಂದಿ, ಸಂಜಯ ಮಾಳಿ, ಕೆ‌.ಎಫ್ ಜಾವೂರ ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!