ಮಲಗಿದ್ದ ಮಗು ಹೊತ್ತೋಯ್ದ ಮಂಗಗಳು..

281

ಪ್ರಜಾಸ್ತ್ರ ಸುದ್ದಿ

ಚೆನ್ನೈ: ಮನೆಯ ಮೇಲ್ಛಾವಣಿ ತೆಗೆದು ಮಲಗಿದ್ದ ಮಗುವನ್ನ ಮಂಗಗಳು ಹೊತ್ತೋಯ್ದ ಘಟನೆ ಚೆನ್ನೈನ ತಾಂಜಾವೂರಿನಲ್ಲಿ ನಡೆದಿದೆ. ಇದನ್ನ ನೋಡಿದ ತಾಯಿ ಭುವನೇಶ್ವರಿ ಮಂಗಗಳನ್ನ ಓಡಿಸುವಷ್ಟರಲ್ಲಿ ಮಗುವನ್ನು ತೆಗೆದುಕೊಂಡು ಹೋಗಿವೆಯಂತೆ.

ಬಳಿಕ ತಾಯಿ ನೆರೆ ಹೊರೆಯವರ ಸಹಾಯ ಪಡೆದು ಮಗುವನ್ನ ರಕ್ಷಿಸಲು ಮುಂದಾಗಿದ್ದಾಳೆ. ಮಗು ಕದ್ದೋಯ್ದ ಕೋತಿಗಳು ಕೊಳವೊಂದರ ಬಳಿ ಬಿಟ್ಟು ಹೋಗಿವೆ. ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆಯಾದ್ರು ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!