ಹಳಿ ತಪ್ಪಿದ ರೈಲು, ಹಲವರಿಗೆ ಗಾಯ

141

ಪ್ರಜಾಸ್ತ್ರ ಸುದ್ದಿ

ಹೈದ್ರಾಬಾದ್: ನಾಂಪಲ್ಲಿಯ ಡೆಕ್ಕನ್ ರೈಲು ನಿಲ್ದಾಣದ ಹತ್ತಿರ ಚೆನ್ನೈ ಹೈದ್ರಾಬಾದ್ ಚಾರ್ ಮಿನಾರ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದೆ. ಬುಧವಾರ ಮುಂಜಾನೆ ಈ ಘಟನೆ ನಡೆದಿದ್ದು, 6 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರೈಲು ಕಡಿಮೆ ವೇಗದಲ್ಲಿದ್ದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದೆ. ಎರಡು ಬೋಗಿಗಳು ಹಳಿ ತಪ್ಪಿ ಸಾಕಷ್ಟು ಆತಂಕ ಮೂಡಿಸಿತ್ತು. ಅದೃಷ್ಟವಶಾತ್ ದೊಡ್ಡ ಅನಾಹುತ ನಡೆದಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!