ಮಾಸಾಶನ ಪಡೆಯಲು 2 ಕಿ.ಮೀ ತೆವಳಿಕೊಂಡು ಬಂದ ವೃದ್ಧೆ

145

ಪ್ರಜಾಸ್ತ್ರ ಸುದ್ದಿ

ದಾವಣಗೆರೆ: ಸಾಮಾಜದಲ್ಲಿ ಆಗಾಗ ಸಾಕಷ್ಟು ಅಮಾನವೀಯ ಘಟನೆಗಳು ನಡೆಯುತ್ತವೆ. ಕಾರಣ ನೋಡಿಯೂ ಸುಮ್ಮನಾಗುವ ಇದೇ ಸಮಾಜದಿಂದ. ಕಳೆದ ಎರಡು ತಿಂಗಳಿನಿಂದ ಮಾಸಾಶನ ಬಂದಿಲ್ಲವೆಂದು, ವೃದ್ಧೆಯೊಬ್ಬರು 2 ಕಿಲೋ ಮೀಟರ್ ತೆವಳಿಕೊಂಡು ಪೋಸ್ಟ್ ಆಫೀಸ್ ಗೆ ಬಂದ ಘಟನೆ ಹರಿಹರದಲ್ಲಿ ನಡೆದಿದೆ.

ನಂದಿತಾವರೆ ರೇಣುಕಾ ಕ್ಯಾಂಪಿನಿಂದ ವೃದ್ಧೆ ಗಿರಿಜಮ್ಮ ಮುಂಜಾನೆ 8 ಗಂಟೆಗೆ ಹೊರಟು ಸಂಜೆ 4 ಗಂಟೆಗೆ ಕುಣೆಬೆಳೆಕೆರೆಯ ಪೋಸ್ಟ್ ಆಫೀಸ್ ಗೆ ಬಂದಿದ್ದಾರೆ. ಘಟನೆ ಬಗ್ಗೆ ತಿಳಿದ ಗ್ರಾಮಾಧಿಕಾರಿ ಎಚ್ಚೆತ್ತುಕೊಂಡು ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ವೃದ್ಧೆ ಗಿರಿಜಮ್ಮ ಪತಿ ಮೃತಪಟ್ಟಿದ್ದಾರೆ. ಇವರಿಗೆ ಮಕ್ಕಳಿಲ್ಲ. ಮಾಸಾಶನವೇ ಆಧಾರ. ಅದು ಕಳೆದ 2 ತಿಂಗಳಿನಿಂದ ಬಂದಿಲ್ಲ. ಪೋಸ್ಟ್ ಮ್ಯಾನ್ ಗೆ ಕೇಳಿದರೆ ಬಂದಿಲ್ಲ ಎಂದು ಗದರಿಸಿದ್ದಾನೆ ಅಂತಾ ನೋವು ತೋಡಿಕೊಂಡಿದ್ದಾರೆ. ಗಿರಿಜಮ್ಮ ಪರಿಸ್ಥಿತಿ ಗೊತ್ತಿದ್ದೂ ಯಾರೂ ಸಹಾಯಕ್ಕೆ ಬರದೆ ಇರುವುದು ನಿಜಕ್ಕೂ ದುರಂತ.




Leave a Reply

Your email address will not be published. Required fields are marked *

error: Content is protected !!