ಗೊಲ್ಲಾಳೇಶ್ವರ ಜಾತ್ರೆ ಬಲು ಜೋರು

322

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಪ್ರಸಿದ್ಧ ಗೋಲಗೇರಿ ಗೊಲ್ಲಾಳೇಶ್ವರ ಜಾತ್ರೆ ಶನಿವಾರ ಭರ್ಜರಿಯಾಗಿ ಶುರುವಾಗಿದೆ. ಸಂಜೆ ಸುಮಾರು 6.30ರ ಹೊತ್ತಿಗೆ ಗೊಲ್ಲಾಳೇಶ್ವರನ ರಥವನ್ನು ಭರ್ಜರಿಯಾಗಿ ಎಳೆಯಲಾಗಿದೆ.

ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಜಯ ಘೋಷಗಳೊಂದಿಗೆ ಬೃಹತ್ ರಥವನ್ನು ಎಳೆಯುವ ಮೂಲಕ ಜಾತ್ರೆಯನ್ನು ನಡೆಸಿದರು. ಈ ವೇಳೆ ಬಾಳೆಹಣ್ಣು, ನಿಂಬೆಹಣ್ಣು, ಉತ್ತತ್ತಿಯನ್ನು ರಥದ ಮೇಳೆ ಎಸೆಯಲಾಯಿತು.

ತಾಲೂಕು ಮಾತ್ರವಲ್ಲದೆ ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಇಲ್ಲಿಗೆ ಆಗಮಿಸಿ ದರ್ಶನ ಪಡೆದರು. ಕೋವಿಡ್ 19 ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಅದ್ಧೂರಿ ಜಾತ್ರೆ ನಡೆದಿರಲಿಲ್ಲ. ಈ ವರ್ಷ ಎಂದಿನಂತೆ ವಿಜೃಂಭಣೆಯ ಜಾತ್ರೆ ನಡೆಯಿತು. ಇನ್ನು ಶ್ರೀಶೈಲಕ್ಕೆ ಹೋಗಿ ಬಂದವರು ಇಲ್ಲಿಗೆ ಬರಬೇಕು ಅನ್ನೋ ಪ್ರತೀತಿ ಈ ಭಾಗದಲ್ಲಿದೆ.




Leave a Reply

Your email address will not be published. Required fields are marked *

error: Content is protected !!