ಬೆಂಗಳೂರು ವಿಮಾನ ನಿಲ್ದಾಣದಲ್ಲಿ 67.57 ಲಕ್ಷ ಮೌಲ್ಯದ ಚಿನ್ನ ವಶ

166

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ದೇವನಹಳ್ಳಿ ಹತ್ತಿರ ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 67.57 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಕ್ವಾಲಲಂಪುರದಿಂದ ಬಂದ ಇಬ್ಬರು ಮಹಿಳೆಯಿಂದ 17.9 ಲಕ್ಷ ಮೌಲ್ಯದ ಚಿನ್ನ, ಮಲೇಷ್ಯಾ ಮೂಲದ ಮಹಿಳೆಯಿಂದ 34.4 ಲಕ್ಷ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇನ್ನು ಕುವೈತ್ ನಿಂದ ಭಾರತೀಯ ಮೂಲದ ವ್ಯಕ್ತಿಯಿಂದ 15.26 ಲಕ್ಷ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ.

ಕ್ವಾಲಲಂಪುರದಿಂದ ಬಂದ ಭಾರತೀಯ ಮೂಲದ ಮಹಿಳೆ 300.95 ಗ್ರಾಂ ಚಿನ್ನವನ್ನು ಪೇಸ್ಟ್ ಬ್ಲೌಸ್ ನಲ್ಲಿ ಇಟ್ಟಿದ್ದಳು. ಇನ್ನು ಕುವೈತ್ ನಿಂದ ಬಂದ ವ್ಯಕ್ತಿ ಡ್ರೈಪ್ರೂಟ್ಸ್ 254 ಗ್ರಾಂ ಚಿನ್ನವನ್ನು ಸಣ್ಣ ಸಣ್ಣ ತುಣುಕಗಳನ್ನು ಮಾಡಿ ಇಟ್ಟಿದ್ದ. ಮಲೇಷ್ಯಾದಿಂದ ಮಹಿಳೆ ಗುದದ್ವಾರದಲ್ಲಿ 578.27 ಗ್ರಾಂ ಚಿನ್ನವನ್ನು ಇಟ್ಟುಕೊಂಡು ಬಂದಿದ್ದಳು. ವೈದ್ಯರ ನೆರವಿನಿಂದ ಅವುಗಳನ್ನು ಹೊರ ತೆಗೆಯಲಾಗಿದೆ.




Leave a Reply

Your email address will not be published. Required fields are marked *

error: Content is protected !!