ಉತ್ತಮ ಆಡಳಿತ ಸೂಚ್ಯಂಕದಲ್ಲಿ ಕರುನಾಡಿಗೆ 3ನೇ ಸ್ಥಾನ

334

ನವದೆಹಲಿ: ಉತ್ತಮ ಆಡಳಿತ ಸೂಚ್ಯಂಕದಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ ಒಲಿದಿದೆ. ಸಿಬ್ಬಂದಿ ಸಚಿವಾಲಯದ ಅಂಕಿ ಅಂಶಗಳ ಆಧಾರದ ಮೇಲೆ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದು ತಮಿಳುನಾಡು ಮೊದಲು ಹಾಗೂ ಮಹಾರಾಷ್ಟ್ರ 2ನೇ ಸ್ಥಾನದಲ್ಲಿವೆ.

ಇನ್ನು ಉಳಿದ ರಾಜ್ಯಗಳ ನಂಬರ್ ನೋಡಿದ್ರೆ, ಛತ್ತೀಸಗಡ 4ನೇ ಸ್ಥಾನದಲ್ಲಿದೆ. ಆಂಧ್ರ, ಗುಜರಾತ್, ಹರಿಯಾಣ ಹಾಗೂ ಕೇರಳ ಕ್ರಮವಾಗಿ 5, 6, 7 ಹಾಗೂ 8ನೇ ಸ್ಥಾನದಲ್ಲಿವೆ. ರಾಜ್ಯಗಳು, ದೊಡ್ಡ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೆಂದು ಮೂರು ಭಾಗಗಳನ್ನ ಮಾಡಲಾಗಿದೆ. ಈ ಮೂರು ವಿಭಾಗಗಳ ಮೂಲಕ ರ್ಯಾಂಕ್ ನೀಡಲಾಗಿದೆ.

ಕೈಗಾರಿಕೆ, ಕೃಷಿ, ಆರ್ಥಿಕ ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧನೆ ಆಧಾರದ ಮೇಲೆ ರ್ಯಾಂಕ್ ನೀಡಲಾಗಿದೆ. ಉತ್ತಮ ಆರ್ಥಿಕ ಆಡಳಿತ ನೀಡಿದ ಸೂಚ್ಯಂಕದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.




Leave a Reply

Your email address will not be published. Required fields are marked *

error: Content is protected !!