ಬಿಎಂಟಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ

326

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾದಿಂದಾಗಿ ಲಾಕ್ ಡೌನ್ ಮಾಡಲಾಗಿತ್ತು. ಸೋಂಕಿನ ಪ್ರಮಾಣ ಇಳಿಕೆ ಕಂಡ ಪರಿಣಾಮ ಅನ್ ಲಾಕ್ ಪ್ರಕ್ರಿಯೆ ಶುರುವಾಗಿದೆ. ಹೀಗಾಗಿ ಬಸ್ ಸಂಚಾರ ಸಹ ಶುರುವಾಗಿದೆ. ಸಾರಿಗೆ ಸಿಬ್ಬಂದಿ ಮುಷ್ಕರ, ಲಾಕ್ ಡೌನ್ ನಿಂದಾಗಿ ಬಸ್ ಸೇವೆ ಬಂದ್ ಆಗಿತ್ತು.

ಅನ್ ಲಾಕ್ ಬಳಿಕ ಬಸ್ ಸೇವೆ ಶುರುವಾಗಿದ್ದು, ಮಾಸಿಕ ಪಾಸ್ ಪಡೆದವರಿಗೆ ಅನಾನುಕೂಲವಾಗಬಾರದೆಂದು ಪಾಸ್ ಅವಧಿ ವಿಸ್ತರಣೆ ಮಾಡಲಾಗಿದೆ. ಈಗ ಬಿಎಂಟಿಸಿ ಮತ್ತೊಂದು ಸಿಹಿ ಸುದ್ದಿ ನೀಡಿದೆ. ರಿಯಾತಿ ದರದಲ್ಲಿ ಮಾಸಿಕ ಪಾಸ್ ನೀಡಲು ಮುಂದಾಗಿದೆ.

ಬಸ್ ಕೇಂದ್ರಗಳಲ್ಲಿ, ಬೆಂಗಳೂರು ಒನ್ ಕೇಂದ್ರಗಳಲ್ಲಿ, ಖಾಸಗಿ ಏಜೆನ್ಸಿ ಮೂಲಕ ಬಸ್ ಪಾಸ್ ಗಳನ್ನ ರಿಯಾತಿ ದರದಲ್ಲಿ ನೀಡಲಾಗ್ತಿದೆ. ಇದ್ರಿಂದ ಒಂದಿಷ್ಟು ಆರ್ಥಿಕ ಹೊರೆ ಕಡಿಮೆಯಾಗಲಿದೆ.




Leave a Reply

Your email address will not be published. Required fields are marked *

error: Content is protected !!