ಗ್ರಾಮಗಳ ಕನ್ನಡ ಹೆಸರು ಬದಲಾವಣೆಯಿಲ್ಲವೆಂದ ಶಾಸಕ

636

ಪ್ರಜಾಸ್ತ್ರ ಸುದ್ದಿ

ಕಾಸರಗೋಡು: ಕರ್ನಾಟಕ-ಕೇರಳ ಗಡಿಗೆ ಹೊಂದಿಕೊಂಡಿರುವ ಕನ್ನಡಿಗರೇ ಹೆಚ್ಚಾಗಿರುವ ಕಾಸರಗೋಡು ಹಾಗೂ ಮಂಜೇಶ್ವರ ಭಾಗದ ಹಳ್ಳಿಗಳ ಕನ್ನಡದ ಹೆಸರುಗಳನ್ನ, ಬದಲು ಮಾಡಲು ಕೇರಳ ಸರ್ಕಾರ ಮುಂದಾಗಿದೆ ಅನ್ನೋ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎಕೆಎಂ ಅಶ್ರಫ್ ಸ್ಪಷ್ಟನೆ ನೀಡಿದ್ದಾರೆ.

ಫೇಸ್ ಬುಕ್, ಟ್ವೀಟರ್ ಮೂಲಕ ಸ್ಪಷ್ಟನೆ ನೀಡಿರುವ ಶಾಸಕರು, ಕನ್ನಡದ ಹೆಸರುಗಳನ್ನ ಬದಲು ಮಾಡುವ ಪ್ರಸ್ತಾಪ ಕೇರಳ ಸರ್ಕಾರದ ಮುಂದಿಲ್ಲ. ಈ ಬಗ್ಗೆ ಕೇರಳ ಮುಖ್ಯಮಂತ್ರಿಗಳ ಕಚೇರಿ, ಅವರ ಪಿಎ ಹಾಗೂ ಜಿಲ್ಲಾಧಿಕಾರಿಯನ್ನ ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. ಕನ್ನಡದ ಹೆಸರುಗಳನ್ನ ಬದಲಾವಣೆ ಮಾಡುವ ಯಾವುದೇ ಸುತ್ತೋಲೆಯನ್ನ ಕೇರಳ ಸರ್ಕಾರ ಹೊರಡಿಸಿಲ್ಲ ಎಂದು ಹೇಳಿದ್ದಾರೆ.

ಈ ವಿಚಾರವಾಗಿ ರಾಜ್ಯದಲ್ಲಿ ಎಲ್ಲ ರಾಜಕೀಯ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡಪರ ಸಂಘಟನೆಗಳು ಮುಖಂಡರು ಸೇರಿದಂತೆ ಪ್ರತಿಯೊಬ್ಬರು ಅಸಮಾಧಾನ ಹೊರ ಹಾಕಿದ್ದು, ಹೋರಾಟದ ಎಚ್ಚರಿಕೆ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!