ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

597

ಬೆಂಗಳೂರು: ಕರೋನಾದಿಂದಾಗಿ ಇಡೀ ದೇಶ ಲಾಕ್ ಡೌನ್ ಆಗಿದೆ. 1 ರಿಂದ 9ನೇ ತರಗತಿಯ ಪರೀಕ್ಷೆಗಳನ್ನೆಲ್ಲ ರದ್ದು ಮಾಡಿ ಅವರಿಗೆ ಪಾಸ್ ಮಾಡಲಾಗಿದೆ. ಇದೀಗ ಇರೋದು ಪಿಯುಸಿ ಒಂದು ಪರೀಕ್ಷೆ ಹಾಗೂ ಎಸ್ಎಸ್ಎಲ್ ಸಿ ಪರೀಕ್ಷೆ. ಶಿಕ್ಷಣ ಸಚಿವರು 10ನೇ ತರಗತಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಲಾಕ್ ಡೌನ್ ಮುಗಿದ್ಮೇಲೆ ಪರೀಕ್ಷೆ ದಿನಾಂಕ ಘೋಷಣೆ ಮಾಡಲಾಗುತ್ತೆ. ಪರೀಕ್ಷೆ ದಿನಾಂಕ ಘೋಷಣೆಯಾದ್ಮೇಲೆ 1 ವಾರ ಶಾಲೆ ಇರಲಿದೆ ಎಂದಿದ್ದಾರೆ. ಈ ವೇಳೆ ವಿದ್ಯಾರ್ಥಿಗಳಿಗೆ ಉತ್ಸಾಹ, ಚೈತನ್ಯ ತುಂಬುವ ಕೆಲಸ ಮಾಡಲಾಗುತ್ತೆ ಎಂದು ಶಿಕ್ಷಣ ಸಚಿವ ಸುರೇಶಕುಮಾರ ಹೇಳಿದ್ದಾರೆ. ಪರೀಕ್ಷೆಯನ್ನ ಯಾವ ರೀತಿಯಾಗಿ ಎದುರಿಸಬೇಕು ಅನ್ನೋದರ ಕುರಿತು ಮತ್ತೆ ಒಂದಿಷ್ಟು ಸಲಹೆ ಸೂಚನೆಗಳನ್ನ ನೀಡಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!