ಗೌಳಿ ತೆಲುಗು ರೈಟ್ಸ್ ಸೋಲ್ಡ್ ಔಟ್

210

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಹಳ ದಿನಗಳ ನಂತರ ಶ್ರೀನಗರ ಕಿಟ್ಟಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಗೌಳಿ ಚಿತ್ರ ಈಗಾಗ್ಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಟೀಸರ್, ಹಾಡುಗಳಿಂದ ಸಖತ್ ಸೌಂಡ್ ಮಾಡಿರುವ ಗೌಳಿ ಚಿತ್ರ ತಂಡ ಹೊಸ ಅಪ್ ಡೇಟ್ಸ್ ನೀಡಿದೆ.

ನಟ ಶ್ರೀನಗರ ಕಿಟ್ಟಿ ಹಾಗೂ ಪಾವನಗೌಡ ನಟನೆಯ ಗೌಳಿ ಚಿತ್ರದ ತೆಲುಗು ರೈಟ್ಸ್ ಸೋಲ್ಡ್ ಔಟ್ ಆಗಿದೆ. ತೆಲುಗು ಡಬ್ಬಿಂಗ್ ಹಾಗೂ ಥಿಯೇಟ್ರಿಕಲ್ ರೈಟ್ಸ್ ಸೋಲ್ಡ್ ಆಗಿದೆ. ಇನ್ನು ಕೆಲ ದಿನಗಳಲ್ಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಸಿನಿಮಾ ರಿಲೀಸ್ ಆಗಲಿದೆಯಂತೆ.

ಸೂರ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ರಾಘು ಸಿಗಂ ನಿರ್ಮಾಣ ಮಾಡಿದ್ದಾರೆ. ರಂಗಾಯಣ ರಘು ಸೇರಿ ಅನೇಕರ ತಾರಾಬಳಗವಿದೆ. ಫ್ಯಾಮಿಲಿ ಓರೆಂಟೆಡ್ ಮೂವಿ ಒಂದು ರೋಚಕ ಕಥೆ ಹೇಳಲು ಹೊರಟಿದೆ.




Leave a Reply

Your email address will not be published. Required fields are marked *

error: Content is protected !!