ಲೋಕಲ್ ಅಖಾಡಕ್ಕೆ ‘ಪುಟ್ಟ ಗೌರಿ’ ಎಂಟ್ರಿ

364

ಪ್ರಜಾಸ್ತ್ರ ಸುದ್ದಿ

ಬೀಳಗಿ: ಗ್ರಾಮ ಪಂಚಾಯ್ತಿ ಚುನಾವಣೆಯ ಪ್ರಚಾರ ಜೋರಾಗಿದೆ. ನಾಮಪತ್ರ ಸಲ್ಲಿಕೆ ದಿನಾಂಕ ಮುಗಿದಿದ್ದು, ಅಭ್ಯರ್ಥಿಗಳು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಗೆಲ್ಲಲು ಹಲವು ರೀತಿಯ ಕಸರತ್ತು ನಡೆಸಿದ್ದಾರೆ. ಲೋಕಲ್ ಫೈಟ್ ಗೆ ಪುಟ್ಟ ಗೌರಿ ಧಾರವಾಹಿ ಖ್ಯಾತಿಯ ನಟಿ ರಂಜಿನಿ ರಾಘವನ್ ಎಂಟ್ರಿ ಕೊಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ನಟಿ ರಂಜಿನಿ ತಮ್ಮ ಆಪ್ತರ ಪರವಾಗಿ ಪ್ರಚಾರಕ್ಕೆ ಬರ್ತಿದ್ದಾರೆ. ಬಿ.ಎನ್ ಮೇತ್ರಿ, ವಿಜಯಲಕ್ಷ್ಮೀ ಹೂಗಾರ ಹಾಗೂ ಯಂಕಪ್ಪ ನುಚ್ಚಿನ ಎಂಬುವರ ಪರ ಪ್ರಚಾರ ಮಾಡಲು ಶನಿವಾರ ಆಗಮಿಸ್ತಿದ್ದಾರೆ.

ಇನ್ನು 19 ಸ್ಥಾನಗಳ ಗಿರಿಸಾಗರ ಗ್ರಾಮ ಪಂಚಾಯ್ತಿಯಲ್ಲಿ ಈಗಾಗ್ಲೇ 6 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, 13 ಸ್ಥಾನಗಳಿಗೆ ಎಲೆಕ್ಷನ್ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!