ಹೋಲ್ಡ್ ಆನ್ ಬೇಬಿ.. ವೈರಲ್ ಆಯ್ತು ಈ ಫೋಟೋ..

293

ಪ್ರಜಾಸ್ತ್ರ ವೈರಲ್ ಸುದ್ದಿ

ನವ ಜೋಡಿಯ ಬದುಕಿನಲ್ಲಿ ಮೊದಲ ರಾತ್ರಿ ಅನ್ನೋದು ಅವಿಸ್ಮರಣೀಯ ದಿನ. ಈ ಬಗ್ಗೆ ವರನ ಕಲ್ಪನೆ ಒಂದು ರೀತಿಯಿದ್ರೆ, ವಧುವಿನ ಕಲ್ಪನೆ ಮತ್ತೊಂದು ರೀತಿ ಇರುತ್ತೆ. ಒಟ್ಟಿನಲ್ಲಿ ಫಸ್ಟ್ ನೈಟ್ ಅನ್ನೋದು ಹಲವು ಕನಸುಗಳ ಮಿಲನದ ರಾತ್ರಿಯಾಗಿರುತ್ತೆ. ಹೀಗಾಗಿ ಅಂದು ಎಲ್ಲ ಕೆಲಸಕ್ಕೂ ಗುಡ್ ಬೈ ಹೇಳಿ ಖುಷಿಯಾಗಿರಲು ನೋಡ್ತಾರೆ.

ಆದ್ರೆ, ಇಲ್ಲೊಬ್ಬ ಆಸಾಮಿ ಮೊದಲ ರಾತ್ರಿಯ ಸಮಯದಲ್ಲಿ ವರ್ಕ್ ಫ್ರಂ ಹೋಂ ಕೆಲಸ ಮಾಡ್ತಿರುವ ಫೋಟೋ ವೈರಲ್ ಆಗಿದೆ. ಮದುವೆಯ ಡ್ರೆಸ್ ನಲ್ಲಿರುವ ಜೋಡಿಯ ಫೋಟೋದಲ್ಲಿ ವರ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡ್ತಿದ್ದರೆ ವಧು ಮಂಚದಲ್ಲಿ ಕಾಯುತ್ತಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಜೊತೆಗೆ ಹೋಲ್ಡ್ ಆನ್ ಬೇಬಿ ಅನ್ನೋ ಪದ ಬಾರಿ ಸದ್ದು ಮಾಡ್ತಿದೆ.

ಟ್ವೀಟರ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಎಲ್ಲೆಡೆ ಈ ಫೋಟೋ ವೈರಲ್ ಆಗ್ತಿದೆ. ಜನರು ತುಂಬಾ ಫನ್ನಿಯಾದ ಲೈನ್ ಬರೆಯುತ್ತಿದ್ದಾರೆ. ಮೀಮ್ಸ್ ಅಬ್ಬರ ಸಹ ಜೋರಾಗಿದೆ.




Leave a Reply

Your email address will not be published. Required fields are marked *

error: Content is protected !!