ಕೋಳಿಗೂ ಟಿಕೆಟ್ ಕೊಟ್ಟ ಕಂಡೆಕ್ಟರ್

272

ಪ್ರಜಾಸ್ತ್ರ ವೈರಲ್ ಸುದ್ದಿ

ಪುತ್ತೂರು: ಕಂಡೆಕ್ಟರ್ ವೊಬ್ಬ ಕೋಳಿಗೂ ಬಸ್ ಟಿಕೆಟ್ ನೀಡಿದ ಘಟನೆ ದಕ್ಷಿಣ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಹೆರಿಕೆ ತೀರಿಸಲು ಕೋಳಿ ತೆಗೆದುಕೊಂಡು ಹೊರಟ್ಟಿದ್ದ ವ್ಯಕ್ತಿಯ ಜೊತೆಗೆ ಕೋಳಿಗೂ ಫುಲ್ ಚಾರ್ಜ್ ಟಿಕೆಟ್ ನೀಡಿದ್ದಾನೆ.

ಕೋಳಿಗೆ 50 ರೂಪಾಯಿ ಟಿಕೆಟ್ ನೀಡಿರುವುದು ಫುಲ್ ವೈರಲ್ ಆಗಿದೆ. ರಾಜ್ಯ ಸಾರಿಗೆ ಇಲಾಖೆ ಕ್ರಮವನ್ನ ಖಂಡಿಸಿರುವ ಪುತ್ತೂರು ಶಾಸಕ ಸಂಜೀವ ಮಠಂದೂರು, ಅವನೇನು ದನ, ಕುರಿ ಒಯುತ್ತಿದ್ದೇನೆ ಎಂದು ಪ್ರಶ್ನಿಸಿದ್ದಾರೆ.

ಕೋಳಿಗೆ ಒಬ್ಬ ವ್ಯಕ್ತಿಯ ದರದಷ್ಟೇ ಟಿಕೆಟ್ ನೀಡಬಹುದು ಅನ್ನೋ ನಿಯಮವಿದೆ ಎಂದು ಸಾರಿಗೆ ಅಧಿಕಾರಿ ಹೇಳಿದ್ದಾರೆ. ಜನಪ್ರತಿನಿಧಿಗಳು ಬಂದ್ರೆ ಪುಕ್ಕಟೆಯಾಗಿ ಕರೆದುಕೊಂಡು ಇವರು, ಕೋಳಿಗೆ ಟಿಕೆಟ್ ನೀಡುವುದ್ರಲ್ಲಿ ನಿಯಮ ಪಾಲಕರು, ಮಹಾ ನೀತಿವಂತರು ಎಂದು ಸಾರ್ವಜನಿಕರು ಕಾಲೆಳೆಯುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!