ದುಪ್ಪಟ್ಟು ಟಿಕೆಟ್ ಹಣ ವಸೂಲಿಗೆ ಬ್ರೇಕ್.. ಎಚ್ಚೆತ್ತುಕೊಂಡ ಸಿಎಂ

318

ಬೆಂಗಳೂರು: ಲಾಕ್ ಡೌನ್ ನಿಂದಾಗಿ ಕಳೆದ ಒಂದೂವರೆ ತಿಂಗಳಿನಿಂದ ಬೇರೆ ಬೇರೆ ಊರುಗಳಲ್ಲಿ ಸಿಲುಕಿಕೊಂಡಿರುವ ಕೂಲಿ ಕಾರ್ಮಿಕರು ವಾಸಪ್ ಊರಿಗೆ ಹೋಗಲು ವ್ಯವಸ್ಥೆ ಮಾಡಲಾಗಿದೆ. ಆದ್ರೆ, ಸಾರಿಕೆ ಇಲಾಖೆ ಮೊದಲಿದ್ದ ದರದ ಬದಲಿಗೆ ದುಪ್ಪಟ್ಟು ಹಣ ವಸೂಲಿ ಮಾಡಲಾಗ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗ್ತಿದ್ದಂತೆ ಸಿಎಂ ಎಚ್ಚೆತ್ತುಕೊಂಡಿದ್ದಾರೆ.

ಬೆಂಗಳೂರಿನಿಂದ ಬಾಗಲಕೋಟೆಗೆ 700 ಬದಲಿಗೆ 1,311 ರೂಪಾಯಿ, ಬಳ್ಳಾರಿಗೆ 450ರ ಬದಲಿಗೆ 884, ಬೆಳಗಾವಿ 800ರ ಬದಲಿಗೆ 1,478.. ಹೀಗೆ ಡಬಲ್ ತ್ರಿಬಲ್ ಟಿಕೆಟ್ ದರ ಪಡೆದು ಕೂಲಿ ಕಾರ್ಮಿಕರಿಗೆ ಮತ್ತಷ್ಟು ಬರೆ ಎಳೆಯುವ ಕೆಲಸ ಮಾಡ್ತಿದೆ ಎಂದು ಆಕ್ರೋಶ ವ್ಯಕ್ತವಾಯ್ತು. ಇದೀಗ ಇದಕ್ಕೆ ಬ್ರೇಕ್ ಹಾಕಿದ್ದು ಮೊದಲಿದ್ದ ದರವನ್ನ ತೆಗೆದುಕೊಳ್ಳುವಂತೆ ಕೆಎಸ್ಆರ್ ಟಿಸಿ ಇಲಾಖೆಗೆ ಸೂಚಿಸಿದ್ದಾರೆ.

ಕೂಲಿ ಕಾರ್ಮಿಕರಿಂದ ಟಿಕೆಟ್ ದರ ಪಡೆಯುವುದೆ ಬೇಡವೆಂದು ವಿಪಕ್ಷ ನಾಯಕರುಗಳು, ಮುಖಂಡರು, ಸಾಮಾಜಿಕ ಹೋರಾಟಗಾರರು ಹೇಳ್ತಿದ್ದಾರೆ. ಕೆಲಸವಿಲ್ಲದೆ ಒದ್ದಾಡ್ತಿರುವ ಬಡವರು ಎಲ್ಲಿಂದ ಹಣ ಕೊಡಬೇಕು. ಅವರನ್ನ ಅವರ ಊರಿಗೆ ಉಚಿತವಾಗಿ ಕಳಿಸಿಕೊಡುವ ವ್ಯವಸ್ಥೆ ಮಾಡಿ ಎಂದು ಹೇಳಲಾಗ್ತಿದ್ದು, ರಾಜ್ಯ ಸರ್ಕಾರ ಏನು ಮಾಡುತ್ತೆ ನೋಡಬೇಕು.

ಇನ್ನು ರಾಜ್ಯದಿಂದ ಹೊರ ರಾಜ್ಯಕ್ಕೆ ಹೋಗುವ ಕಾರ್ಮಿಕರು, ವಿದ್ಯಾರ್ಥಿಗಳು, ಇತರರು ಈ ಆನ್ ಲೈನ್ ಮೂಲಕ ಅನುಮತಿ ಪಡೆಯಬಹುದುwww.//sevasindhu.karnataka.gov.in




Leave a Reply

Your email address will not be published. Required fields are marked *

error: Content is protected !!