ಬಿಟೌನ್ ‘ಕ್ವೀನ್’ ವಿರುದ್ಧ ಎಫ್ಐಆರ್

329

ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನಟಿ ಕಂಗನಾ ಸಹೋದರಿ ರಂಗೋಲಿಯ ಟ್ವೀಟರ್ ಖಾತೆಯನ್ನ ಡಿಲಿಟ್ ಮಾಡಲಾಗಿತ್ತು. ಹೀಗಾಗಿ ಸಹೋದರಿ ಬೆಂಬಲಿಸಿ ನಟಿ ಕಂಗನಾ ನೀಡಿದ್ದ ಹೇಳಿಕೆ ಸಂಬಂಧ ದೂರು ದಾಖಳಿಸಲಾಗಿದೆ. ವೈದ್ಯರ ಮೇಲೆ ದಾಳಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕಂಗನಾ ಸಹೋದರಿ ವಿಡಿಯೋ ಮಾಡಿದ್ರು, ಅದರಲ್ಲಿ ಮುಸ್ಲಿಂರನ್ನ ಭಯೋತ್ಪಾದಕರು ಎಂದು ಹೇಳಿದ್ರಂತೆ.

ನಟಿ ಕಂಗನಾ ಇದನ್ನ ಸಮರ್ಥಿಸಿಕೊಂಡಿದ್ದಾರೆ ಎಂದು ಹೇಳಿ, ಖಾಶಿಫ ಖಾನ್ ದೇಶಮುಖ ಎಂಬುವರು ಮುಂಬೈ ನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕರೋನಾ ವಾರಿಯರ್ಸ್ ಮೇಲೆ ಉಗುಳಿದವರು ಹಾಗೂ ಹಲ್ಲೆ ಮಾಡಿದವರ ವಿಚಾರಕ್ಕೆ ಸಂಬಂಧಿಸಿದಂತೆ ರಂಗೋಲಿ, ಕೋಮುಸೌಹಾರ್ದ ಹಾಳು ಮಾಡುವ ಪೋಸ್ಟ್ ಹಾಕಿದ್ರಂತೆ. ಹೀಗಾಗಿ ಇದನ್ನ ಡಿಲಿಟ್ ಮಾಡಲಾಗಿದೆ.

ಸಹೋದರಿ ರಂಗೋಲಿ, ಎಲ್ಲ ಮುಸ್ಲಿಂರನ್ನ ಭಯೋತ್ಪಾದಕರು ಎಂದು ಹೇಳಿಲ್ಲ. ಯಾರು ವೈದ್ಯರ ಮೇಲೆ ಉಗುಳಿದ್ದಾರೋ ಅವರಿಗೆ ಹೇಳಿದ್ದಾರೆ ಎಂದು ನಟಿ ಕಂಗನಾ ಸಮರ್ಥಿಸಿಕೊಂಡಿದ್ರು.




Leave a Reply

Your email address will not be published. Required fields are marked *

error: Content is protected !!