ಮಕಾಡೆ ಮಲಗಿದ ಕಂಗನಾ ‘ಧಾಕಡ್’

258

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಅಂಗಳದಲ್ಲಿ ಸೂಪರ್ ಸ್ಟಾರ್ ನಟಿ ಕಂಗನಾ ರಣಾವತ್ ಇತ್ತೀಚೆಗೆ ಸಿನಿಮಾಗಳಿಗಿಂತ ಸದ್ದು ಮಾಡಿದ್ದು ವಿವಾದಾತ್ಮಕ ಹೇಳಿಕೆಗಳಿಂದ. ಕಳೆದ ವಾರ ಕಂಗನಾ ನಟನೆಯ ಧಾಕಡ್ ಸಿನಿಮಾ ರಿಲೀಸ್ ಆಗಿದೆ. ಪ್ರೇಕ್ಷಕರು ಥಿಯೇಟರ್ ಗೆ ಬರದೆ ದೂರ ಉಳಿದಿದ್ದಾರೆ.

ಸುಮಾರು 70-80 ಕೋಟಿ ರೂಪಾಯಿ ಹೂಡಿಕೆಯಲ್ಲಿ ನಿರ್ಮಾಣವಾದ ಚಿತ್ರ ಕೇವಲ 3 ಕೋಟಿ ರೂಪಾಯಿ ಆಸುಪಾಸು ಕಲೆಕ್ಷನ್ ಮಾಡಿದೆ. ಶುಕ್ರವಾರ ಕೇವಲ 20 ಟಿಕೆಟ್ ಮಾರಾಟವಾಗಿದೆ. ಇದರಿಂದಾಗಿ ಅಂದು 4,420 ರೂಪಾಯಿ ಬಂದಿದೆ. ಈ ಮೂಲಕ ಕಂಗನಾ ಸಿನಿಮಾ ಮಕಾಡೆ ಮಲಗಿದೆ.

ಧಾಕಡ್ ಜೊತೆಗೆ ಭೂಲ್ ಭುಲಯ್ಯ-2 ಚಿತ್ರ ರಿಲೀಸ್ ಆಗಿದ್ದು, ಇದಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಹಿಂದಿ ಚಿತ್ರಗಳು ಸಿನಿ ರಸಿಕರನ್ನು ಸೆಳೆಯುವಲ್ಲಿ ಸೋಲುತ್ತಿವೆ. ಹಿಂದಿ ನೆಲದಲ್ಲಿ ಸೌಥ್ ಸಿನಿಗಳು ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಬಾಲಿವುಡ್ ಸ್ಟಾರ್ ನಟ, ನಟಿಯರ ಓಟಕ್ಕೆ ಬ್ರೇಕ್ ಹಾಕುತ್ತಿವೆ.




Leave a Reply

Your email address will not be published. Required fields are marked *

error: Content is protected !!