ಬ್ರೇಕಿಂಗ್ ನ್ಯೂಸ್
Search

ಹು-ಧಾ ಪಾಲಿಕೆ: ಈರೇಶ್ ಅಂಚಟಗೇರಿ ಮೇಯರ್

326

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಆಗಿ ಬಿಜೆಪಿ ಈರಣ್ಣ ಅಂಚಟಗೇರಿ ಆಯ್ಕೆ ಆಗಿದ್ದಾರೆ. ಈ ಮೂಲಕ 3ನೇ ಬಾರಿಗೆ ಮೇಯರ್ ಸ್ಥಾನ ಬಿಜೆಪಿಗೆ ಒಲಿದಿದೆ. ಉಪ ಮೇಯರ್ ಆಗಿ ಉಮಾ ಮುಕಂದ ಆಯ್ಕೆಯಾಗಿದ್ದಾರೆ.

ಅಂಚಟಗೇರಿ 50, ಉಮಾ ಮುಕಂದ 51 ಮತಗಳನ್ನು ಪಡೆದು ಆಯ್ಕೆಯಾದರು. ಕಾಂಗ್ರೆಸ್ ನ ಮೇಯರ್ ಅಭ್ಯರ್ಥಿ ಮಯೂರ ಮೋರೆ 35, ಉಪ ಮೇಯರ್ ಅಭ್ಯರ್ಥಿ ದೀಪಾ ನೀರಲಕಟ್ಟಿ 35 ಮತ ಪಡೆದರು. ಧಾರವಾಡ 4ನೇ ವಾರ್ಡಿನ ಸದಸ್ಯ ಈರೇಶ್ ಮೇಯರ್ ಹಾಗೂ ಹುಬ್ಬಳ್ಳಿಯ 44ನೇ ವಾರ್ಡ್ ಸದಸ್ಯ ಉಮಾ ಮುಕಂದ ಉಪ ಮೇಯರ್ ಆಗಿದ್ದಾರೆ. 82 ಸದಸ್ಯರ, 7 ಜನಪ್ರತಿನಿಧಿಗಳು ಮತದಾನದ ಹಕ್ಕು ಹೊಂದಿದ್ದರು.




Leave a Reply

Your email address will not be published. Required fields are marked *

error: Content is protected !!