ಯಶ್ ಶೈಲಿಯಲ್ಲಿ ಸಿಗರೇಟ್ ಸೇದಿ ಆಸ್ಪತ್ರೆ ಸೇರಿದ ಬಾಲಕ

436

ಪ್ರಜಾಸ್ತ್ರ ಸುದ್ದಿ

ಹೈದ್ರಾಬಾದ್: ಕನ್ನಡದ ಕೆಜಿಎಫ್-2 ಚಿತ್ರ ಹಲವು ಭಾಷೆಗಳಲ್ಲಿ ಬಿಡುಗಡೆಗೆ ಹೊಸ ದಾಖಲೆ ನಿರ್ಮಿಸಿತು. ಈ ಚಿತ್ರದ ಗಳಿಕೆ ಮುಂದೆ ದಶಕಗಳ ದಾಖಲೆಗಳು ಉಡೀಸ್ ಆದವು. ಯುವ ಜನತೆಯ ಮೇಲೆ ಸಾಕಷ್ಟು ಪ್ರಭಾವ ಬೀರಿರುವ ನಟ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸ್ಟೈಲ್ ನಲ್ಲಿ ಸಿಗರೇಟ್ ಸೇದಿ ಅಪ್ರಾಪ್ತನೊಬ್ಬ ಆಸ್ಪತ್ರೆ ಸೇರಿದ್ದೇನೆ.

ರಾಜೇಂದ್ರನಗರದ 15 ವರ್ಷದ ಬಾಲಕ ಸಾಕಷ್ಟು ಕೆಮ್ಮಲು ಶುರು ಮಾಡಿದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಧೂಮಪಾನ ಮಾಡುವವರಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣಗಳು ಕೈನಲ್ಲಿ ಕಂಡು ಬಂದಿವೆ. ಬಾಲಕನನ್ನು ವೈದ್ಯರು ವಿಚಾರಿಸಿದಾಗ ಕೆಜಿಎಫ್ ಚಿತ್ರದಲ್ಲಿನ ನಟ ಯಶ್ ಶೈಲಿಯಲ್ಲಿ ಸಿಗರೇಟ್ ಸೇದಿರುವುದಾಗಿ ಹೇಳಿದ್ದಾನೆ. ಎರಡು ದಿನದಲ್ಲಿ ಪ್ಯಾಕ್ ಗಟ್ಟಲೇ ಸಿಗರೇಟ್ ಸೇದಿ ಆಸ್ಪತ್ರೆ ಸೇರಿದ್ದಾನೆ. ಈ ಕುರಿತು ಆಸ್ಪತ್ರೆಯ ವೈದ್ಯ ಡಾ.ರೋಹಿತ್ ರೆಡ್ಡಿ ಯುವ ಜನತೆಗೆ ಧೂಮಪಾನದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಕೆಜಿಎಫ್-2 ಚಿತ್ರದ ಟೀಸರ್ ಬಿಡುಗಡೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ತಂಬಾಕು ವಿರೋಧಿ ಘಟಕವು ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಂಗದೂರು ಅವರಿಗೆ ಚಿತ್ರದಲ್ಲಿನ ದೃಶ್ಯಕ್ಕಾಗಿ ನೋಟಿಸ್ ನೀಡಲಾಗಿತ್ತು ಅನ್ನೋದು ಇಲ್ಲಿ ನೆನಪು ಮಾಡಿಕೊಳ್ಳಬಹುದು.




Leave a Reply

Your email address will not be published. Required fields are marked *

error: Content is protected !!