ಪ್ರಜಾಸ್ತ್ರ ಸುದ್ದಿ
ಉಜ್ಜಯಿನಿ: 12 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಸಂಬಂಧ ಮೂವರು ಕಿರಾತಕರನ್ನು ಬಂಧಿಸಲಾಗಿದೆ. ಏನು ಅರಿಯದ 12 ವರ್ಷದ ಬಾಲಕಿ ಮೇಲೆ ಕಾಮುಕರು ಅಟ್ಟಹಾಸ ಮೆರೆದಿದ್ದು, ಸಹಾಯಕ್ಕಾಗಿ ಅರೆಬೆತ್ತಲೆಯಾಗಿ ಬಾಲಕಿ ತಿರುಗಾಡಿರುವ ವಿಡಿಯೋ ವೈರಲ್ ಆಗಿದೆ.
ಮಧ್ಯಪ್ರದೇಶದ ಉಜ್ಜನಿಯಲ್ಲಿ ನಡೆದ ಈ ಕೃತ್ಯ ಮತ್ತೆ ಮತ್ತೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿತು. ಇನ್ನೊಂದು ನೋವಿನ ಸಂಗತಿ ಅಂದರೆ ಸಂತ್ರಸ್ತೆ ಬಾಲಕಿ ಮನೆಯಿಂದ ಮನೆಗೆ ಸಹಾಯಕ್ಕಾಗಿ ಅಲೆಯುತ್ತಿದ್ದರೂ ಯಾರೊಬ್ಬರೂ ಸಹಾಯಕ್ಕೆ ಬಂದಿಲ್ಲ. ರಕ್ತಸ್ರಾವದಿಂದ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ.
ಹೀಗೆ ರಸ್ತೆಯಲ್ಲಿ ಬಿದ್ದು ಜೀವನಮರಣದ ನಡುವೆ ನರಳುತ್ತಿದ್ದ ಬಾಲಕಿಯನ್ನು ಒಬ್ಬರು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.