ಮಳೆಯಿಂದ ಎಕರೆ ದಾಕ್ಷಿ ನಾಶ: ಸಿಎಂಗೆ ಮನವಿ ಮಾಡಿದ ರೈತ ಕುಟುಂಬ

342

ಬೆಂಗಳೂರು: ಬುಧವಾರ ಸುರಿದ ಭರ್ಜರಿ ಮಳೆಯಿಂದಾಗಿ ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ದ್ರಾಕ್ಷಿ ಸಂಪೂರ್ಣ ನಾಶವಾಗಿದೆ. ಹೀಗಾಗಿ ಆ ರೈತ ಕುಟುಂಬ ಸಿಎಂಗೆ ಮನವಿ ಮಾಡಿಕೊಂಡಿದೆ. ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ವೆಂಕಟಗಿರಿಕೋಟೆ ಗ್ರಾಮದ ದೇವರಾಜಪ್ಪ ಅನ್ನೋ ರೈತ, ತನ್ನ ಒಂದೂವರೆ ಎಕರೆ ಜಮೀನಿನಲ್ಲಿ ಕಳೆದ 3-4 ವರ್ಷಗಳಿಂದ ಬೆಳೆದಿದ್ದ ದ್ರಾಕ್ಷಿ, ಬುಧವಾರ ಸುರಿದ ಮಳೆಯಿಂದ ಸಂಪೂರ್ಣ ನಾಶವಾಗಿದೆ. ಸುಮಾರು 30 ರಿಂದ 40 ಟನ್ ದ್ರಾಕ್ಷಿ ಕಟಾವಿಗೆ ಬಂದಿತ್ತು. ಇದ್ರಿಂದಾಗಿ ಸಿಎಂ ಹಾಗೂ ಉಸ್ತುಚಾರಿ ಸಚಿವ ಆರ್. ಅಶೋಕ ಅವರು ಸಹಾಯ ಮಾಡಬೇಕು ಎಂದು ತಮ್ಮ ನೋವನ್ನ ತೋಡಿಕೊಂಡಿದ್ದಾರೆ.

ಮಳೆ ತಂದ ಅವಾಂತರ: ಎರಡು ಎಕರೆ ದ್ರಾಕ್ಷಿ ಬೆಳೆ ನಾಶ

ಮಳೆ ತಂದ ಅವಾಂತರ: ದೇವನಹಹಳ್ಳಿಯಲ್ಲಿ ಎರಡು ಎಕರೆ ದ್ರಾಕ್ಷಿ ಬೆಳೆ ನಾಶBS Yediyurappa Siddaramaiah

Posted by Bengaluru Zone on Thursday, 30 April 2020

ಹೀಗೆ ಬೆಳೆ ನಾಶದಿಂದ ಕಂಗಾಲಾದ ಕುಟುಂಬ, ಮಾನವೀಯ ದೃಷ್ಟಿಯಿಂದ ನಮ್ಮ ನೆರವಿಗೆ ಬರಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಅನೇಕ ಕಡೆ ದ್ರಾಕ್ಷಿ ಬೆಳೆ ನಾಶವಾಗಿರುವುದು ಕಂಡು ಬಂದಿದೆ.




Leave a Reply

Your email address will not be published. Required fields are marked *

error: Content is protected !!