ಮೇ 3ರ ಬಳಿಕ ರಾಜ್ಯದ ಪರಿಸ್ಥಿತಿ ಏನು? ಸಿಎಂ ನೀಡಿದ ಕಂಪ್ಲೀಟ್ ಮಾಹಿತಿ ಇಲ್ಲಿದೆ

484

ಬೆಂಗಳೂರು: ದೇಶದಲ್ಲಿ ಲಾಕ್ ಡೌನ್ 2ನೇ ಹಂತದಲ್ಲಿದೆ. ಹೀಗಾಗಿ ಜನರು ಯಾವಾಗ ಮುಗಿಯುತ್ತೆ ಅಂತಿದ್ದಾರೆ. ಅದೇ ರೀತಿ ರಾಜ್ಯದ ಜನತೆ ಸಹ ಮೇ 3ರ ನಂತರ ಪರಿಸ್ಥಿತಿ ಏನು ಅಂತಾ ಕೇಳ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಚಿವ ಸಂಪುಟ ಬಳಿಕ ಮಾಹಿತಿ ನೀಡಿದ್ದಾರೆ.

ಪ್ರಮುಖ ಅಂಶಗಳ ಇಲ್ಲಿವೆ:

ಕಂಟೈನ್ಮೆಂಟ್ ಪ್ರದೇಶ ಹೊರತು ಪಡಿಸಿ ಉಳಿದ ಕಡೆ ಮೇ 3ರ ಬಳಿಕ ಲಾಕ್ ಡೌನ್ ಸಡಿಲಿಕೆ

ಈ ಬಗ್ಗೆ ಪ್ರಧಾನಿ ಮೋದಿ ಮತ್ತೊಮ್ಮೆ ಮಾಹಿತಿ ನೀಡಲಿದ್ದಾರೆ

ಗ್ರೀನ್ ಝೋನ್ ಗಳಲ್ಲಿ ಕಾರ್ಖಾನೆ ಕೆಲಸ ಶುರು. ಈ ಬಗ್ಗೆ ಸಂಜೆ ಕೈಗಾರಿಕೋದ್ಯಮಿಗಳ ಜತೆ ಚರ್ಚೆ

ಇನ್ನು 2-3 ತಿಂಗಳು ಲಾಕ್ ಡೌನ್ ಮುಂದುವರೆದ್ರೂ ಆಶ್ಚರ್ಯವಿಲ್ಲ

ಮೇ 3ರ ನಂತರ ಪ್ರಧಾನಿ ಕೆಲ ಸೂಚನೆಗಳನ್ನ ನೀಡ್ತಾರೆ

ಮಾಲ್ ಗಳನ್ನ ತೆರೆಯುವ ಬಗ್ಗೆ ತೀರ್ಮಾನ ಮಾಡಿಲ್ಲ

ಅಂತರ ರಾಜ್ಯ, ಜಿಲ್ಲೆ ಸಂಚಾರಕ್ಕೆ ಒಂದು ದಿನಕ್ಕೆ ಒಮ್ಮೆ ಅವಕಾಶ. ವೈದ್ಯಕೀಯ ತಪಾಸಣೆ ಕಡ್ಡಾಯ

ರೆಡ್ ಜೋನ್ ಬಿಟ್ಟು ಉಳಿದೆಡೆ ಕರ್ಖಾನೆಗಳು ಆರಂಭಕ್ಕೆ ಸೂಚನೆ

ಮೇ 3ರ ತನಕ ಬಾರ್, ಹೇರ್ ಕಟ್ಟಿಂಗ್, ಸಲೂನ್ ಗಳಿಗೆ ನಿರ್ಬಂಧ

ಮದ್ಯದಂಗಡಿ ತೆರೆಯಲು ಕೇಂದ್ರ ಸರ್ಕಾರದ ತೀರ್ಮಾನ

ಲಾಕ್ ಡೌನ್ ವೇಳೆ ಜನರು ಸಹಕರಿಸ್ತದ್ದಾರೆ. ಮಾಧ್ಯಮಗಳು ಕೂಡ ಜಾಗೃತಿ ಮೂಡಿಸ್ತಿದ್ದಾರೆ. ಅವರಿಗೆ ಸರ್ಕಾರದಿಂದ ಧನ್ಯವಾದಗಳು. ಕರೋನಾದಿಂದ ಗುಣಮುಖರಾಗಿ ಬಂದವರ ಆತ್ಮಸ್ಥೈರ್ಯದ ಬಗ್ಗೆ ಸುದ್ದಿ ಮಾಡಿ ಎಂದು ಹೇಳಿದ್ದಾರೆ. ಹೀಗೆ ಇಂದು ನಡೆದ ಸಚಿವ ಸಂಪುಟದಲ್ಲಿ ನಡೆದ ಚರ್ಚಿಗಳ ಬಳಿಕ ಸಿಎಂ ಈ ರೀತಿ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!