ದೇಶದ ಬಡಜನತೆಗಾಗಿ 65 ಸಾವಿರ ಕೋಟಿ ಅಗತ್ಯವಿದೆ: ರಾಜನ್

362

ನವದೆಹಲಿ: ಕರೋನಾ ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕತೆ ಕುಸಿದಿದೆ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡ ಜನತೆಯನ್ನ ಸರಿದಾರಿಗೆ ತರಲು 65 ಸಾವಿರ ಕೋಟಿ ಅಗತ್ಯವಿದೆ ಎಂದು ಆರ್ ಬಿಐ ಮಾಜಿ ಗವರ್ನರ್ ರಘುರಾಮ ರಾಜನ್ ಹೇಳಿದ್ದಾರೆ.

ಕರೋನಾದಿಂದ ದೇಶದಲ್ಲಿ ಆಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಹೊರ ಬರುವ ಮಾರ್ಗಗಳ ಕುರಿತಾಗಿ ರಾಹುಲ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಆಯೋಜಿಸಿರುವ ವಿವಿಧ ಕ್ಷೇತ್ರಗಳ ಗಣ್ಯರ ಜೊತೆಗೆ ವಿಡಿಯೋ ಸಂವಾದದಲ್ಲಿ ಈ ವಿಚಾರವನ್ನ ತಿಳಿಸಿದ್ದಾರೆ.

ದೇಶದ ಬಡಜನರ ಹೊಟ್ಟೆ ತುಂಬಿಸಲು 65 ಸಾವಿರ ಕೋಟಿ ಬೇಕು. ಇದ್ರಿಂದ ಪಾರಾಗಲು ಅತ್ಯಂತ ಬುದ್ದಿವಂತಿಕೆಯಿಂದ ಹಾಗೂ ಮುಂದಾಲೋಚನೆಯಿಂದ ತೆರವುಗೊಳಿಸಬೇಕಿದೆ ಎಂದು ಮೊದಲ ಸಂಚಿಕೆಯ ವಿಡಿಯೋ ಸಂವಾದದಲ್ಲಿ ಸಲಹೆ ನೀಡಿದ್ದಾರೆ. ಅಲ್ದೇ, ಲಾಕ್ ಡೌನ್ ತೆರವುಗೊಳಿಸುವ ಹೊತ್ತಿನಲ್ಲಿ, ಬಡವರ ಹಿತಾಶಕ್ತಿ, ಸೋಂಕು ನಿಯಂತ್ರಣ, ಆರ್ಥಿಕ ಚೇತರಿಕೆ ವಿಷಯಗಳನ್ನ ಸರ್ಕಾರ ಗಮನಿಸಬೇಕಿದೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!