ಗೃಹಜ್ಯೋತಿ ಯೋಜನೆ: ಮೂರೇ ದಿನದಲ್ಲಿ 8 ಲಕ್ಷ ನೋಂದಣಿ

128

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ 5 ಗ್ಯಾರೆಂಟಿಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆ(200 ಯುನಿಟ್ ವಿದ್ಯುತ್ ಉಚಿತ)ಯ ನೋಂದಣಿ ಪ್ರಕ್ರಿಯೆ ಶುರುವಾಗಿದೆ. ಕಳೆದ ಮೂರು ದಿನಗಳಲ್ಲಿ ಬರೋಬ್ಬರಿ 8 ಲಕ್ಷದ 16 ಸಾವಿರದ 631 ಜನರು ನೋಂದಣಿ ಮಾಡಿಸಿದ್ದಾರೆ. ಇದು ಮಂಗಳವಾರದ ಸಂಜೆಯ ವೇಳೆಗೆ ಆಗಿರುವ ಅಂಕಿ ಸಂಖ್ಯೆ.

ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಜೊತೆಗೆ ಸಾರ್ವಜನಿಕರು ತಮ್ಮ ಕಂಪ್ಯೂಟರ್, ಲ್ಯಾಪ್ ಟಾಪ್ ಹಾಗೂ ಮೊಬೈಲ್ ಫೋನ್ ಗಳಲ್ಲಿಯೂ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ವಿದ್ಯುತ್ ಕಚೇರಿಗಳಲ್ಲಿಯೂ ನೋಂದಣಿ ನಡೆದಿದೆ.

ಗೃಹಜ್ಯೋತಿ ಯೋಜನೆಗೆ ನೋಂದಣಿಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ರೀತಿಯಿಂದ ಕಾಲಮಿತಿ ಹೇರಿಲ್ಲ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.




Leave a Reply

Your email address will not be published. Required fields are marked *

error: Content is protected !!