ಗುಮ್ಮಟನಗರಿಯಲ್ಲಿ ಎಷ್ಟು ‘ಗೃಹಲಕ್ಷ್ಮಿಯರು’ ಅರ್ಜಿ ಸಲ್ಲಿಸಿದ್ದಾರೆ?

191

ಪ್ರಜಾಸ್ತ್ರ ಸುದ್ದಿ

ವಿಜಯಪುರ: ರಾಜ್ಯ ಕಾಂಗ್ರೆಸ್ ಸರ್ಕಾರದ 5 ಗ್ಯಾರೆಂಟಿಗಳಲ್ಲಿ ಒಂದಾದ ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಕೊಡುವ ಗೃಹಲಕ್ಷ್ಮಿ ಯೋಜನೆ ಜುಲೈ 20ರಿಂದ ಶುರುವಾಗಿದೆ. ಅಲ್ಲಿಂದ ಇಲ್ಲಿಯ ತನಕ ಜಿಲ್ಲೆಯಲ್ಲಿ ಎಷ್ಟು ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ ಎನ್ನುವುದರ ಕುರಿತು ನೋಡುವುದಾದರೆ,

3 ಲಕ್ಷದ 55 ಸಾವಿರದ 453 ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ 4 ಲಕ್ಷದ 98 ಸಾವಿರದ 477 ಪಡಿತರ ಚೀಟಿಗಳಿವೆ. ಆ ಪೈಕಿ ಶೇಕಡ 71.31ರಷ್ಟು ಅರ್ಜಿ ಸಲ್ಲಿಕೆಯಾಗಿವೆ. ಇನ್ನು 1 ಲಕ್ಷದ 43 ಸಾವಿರದ 24 ಜನರು ಅರ್ಜಿ ಸಲ್ಲಿಸಬೇಕಿದೆ.

ಕರ್ನಾಟಕ ಒನ್, ಗ್ರಾಮ ಒನ್, ಸೇವಾ ಸಿಂಧೂ, ಬಾಪೂಜಿ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆಗಸ್ಟ್ 16ರಂದು ಈ ಯೋಜನೆಗೆ ಚಾಲನೆ ಸಿಗಲಿದೆ. ಈಗಾಗ್ಲೇ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!