10 ವರ್ಷ ಶಿಕ್ಷೆ ಬಳಿಕ ಮಾಜಿ ಸಿಎಂ ಚೌಟಾಲಗೆ ಮತ್ತೆ 4 ವರ್ಷ ಜೈಲು

167

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಹರಿಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಗೆ 4 ವರ್ಷಗಳ ಜೈಲು ಶಿಕ್ಷೆ ಹಾಗೂ 50 ಲಕ್ಷ ರೂಪಾಯಿ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಇಂದು ತೀರ್ಪು ನೀಡಿದೆ.

ಇದರ ಜೊತೆಗೆ ಚೌಟಾಲಗೆ ಸೇರಿ 4 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದೆ. 87 ವರ್ಷದ ಚೌಟಾಲ ವಯಸ್ಸಿನ ಆಧಾರದ ಮೇಲೆ ಶಿಕ್ಷೆಯನ್ನು ಕಡಿಮೆ ನೀಡಬೇಕೆಂದು ಮನವಿ ಮಾಡಿದ್ದರು. ಆದರೆ, ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂದು ಕೋರ್ಟ್ ಅದನ್ನು ಪುರಸ್ಕರಿಸದೆ 4 ವರ್ಷ ಶಿಕ್ಷೆ ನೀಡಿದೆ. ಚೌಟಾಲ 1999ರಿಂದ 2005ರ ವರೆಗೆ ಸಿಎಂ ಆಗದ್ದ ಸಂದರ್ಭದಲ್ಲಿ ಕುಟುಂಬಸ್ಥರು ಹಾಗೂ ಮತ್ತಿರರೊಂದಿಗೆ ಸೇರಿ ಅಕ್ರಮ ಆಸ್ತಿ ಮಾಡಿರುವುದಾಗಿ ಸಿಬಿಐ ಆರೋಪಿಸಿತ್ತು. ಕುಟುಂಬ ಸದಸ್ಯರ ಎಲ್ಲ ಆದಾಯ ಮೀರಿ 1,467 ಕೋಟಿ ಆಸ್ತಿ ಮಾಡಿದ್ದಾರೆ ಎಂದು ಎಫ್ಐಆರ್ ನಲ್ಲಿ ಹೇಳಿತ್ತು. ಕಿರಿಯ ಶಿಕ್ಷರ ನೇಮಕಾತಿ ಹಗರಣದಲ್ಲಿ ಓಂ ಪ್ರಕಾಶ್ ಚೌಟಾಲ ಹಾಗೂ ಅವರ ಪುತ್ರ ಅಜಯ್ ಸಿಂಗ್ ಚೌಟಾಲ 10 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಜೈಲಿನಿಂದ ಜುಲೈ 2, 2021ರಲ್ಲಿ ಬಿಡುಗಡೆಯಾಗಿದ್ದರು. ಹೊರ ಬಂದ ವರ್ಷದೊಳಗೆ ಮತ್ತೆ ಜೈಲು ಸೇರಿದ್ದಾರೆ.




Leave a Reply

Your email address will not be published. Required fields are marked *

error: Content is protected !!