ಕನ್ನೊಳ್ಳಿಗೆ ಭೇಟಿ ನೀಡಿದ ತೋಟಗಾರಿಕೆ ಸಚಿವ

370

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಎರಡು ದಿನ ವಿಜಯಪುರ ಪ್ರವಾಸದಲ್ಲಿದ್ದ ರಾಜ್ಯ ತೋಟಗಾರಿಕಾ ಸಚಿವ ಮುನಿರತ್ನ ಅವರು, ತಾಲೂಕಿನ ಕನ್ನೊಳ್ಳಿ ಗ್ರಾಮದ ಲಿಂಬೆಯ ಸಾವಯವ ರೈತರಾದ ದಶರಥ ಸಿಂಗ್ ರಜಪೂತ ತೋಟಕ್ಕೆ ಭೇಟಿ ನೀಡಿದರು. ಈ ವೇಳೆ ರೈತರನ್ನು ಉದ್ದೇಶಿಸಿ ಮಾತನಾಡಿದರು. ಇದಕ್ಕೂ ಪೂರ್ವದಲ್ಲಿ ವಿಜಯಪುರದ ಐತಿಹಾಸಿಕ ಗೋಲಗುಂಬಜ್ ಆವರಣದಲ್ಲಿ ಸ್ವಾಗತಿಸಲಾಯಿತು. ಬಳಿಕ ಐತಿಹಾಸಿಕ ಸ್ಥಳಗಳ ವೀಕ್ಷಣೆ ಮಾಡಿದರು.

ಅಶೋಕ ಅಲ್ಲಾಪೂರ ಅವರ ಮನೆಯಲ್ಲಿ ಸನ್ಮಾನ

ನಂತರ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಅಶೋಕ ಅಲ್ಲಾಪೂರ ಅವರ ಮನೆಗೆ ಭೇಟಿ ನೀಡಿ ಗೌರವ ಸ್ವೀಕರಿಸಿದರು. ಈ ವೇಳೆ ಲಿಂಬೆ ಅಭಿವೃದ್ಧಿ ಮಂಡಳಿ ಕಾರ್ಯಾಲಯ ಕಟ್ಟಡ ಹಾಗೂ ಸಿಂದಗಿ ಕೋಲ್ಡ್ ಸ್ಟೋರೇಜ್ ನಿರ್ಮಿಸಲು ಸರ್ಕಾರದಿಂದ ಪ್ರಥಮ ಆದ್ಯತೆ ನೀಡುವುದಾಗಿ ತಿಳಿಸಿದರು. ಈ ವೇಳೆ ಹಾವೇರಿಯ ಗುರೂಜಿ, ಸಿ ಎಸ್ ನಾಗೂರ್, ಎಂ.ಎಸ್ ಮಠ, ರಮೇಶ ಪೂಜಾರಿ, ಸುರೇಶ ಮಳಲಿ, ಸಾಯಬಣ್ಣ ದೇವರಮನಿ, ಸಿದ್ದಣ್ಣ ಪೂಜಾರಿ, ರಾಮು ಜೋಶಿ, ಕರಿಯಪ್ಪ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!