ಲೈಂಗಿಕ ದೌರ್ಜನ್ಯ ಪ್ರಕರಣ: ಬಿಜೆಪಿ ಸಚಿವರ ವಿರುದ್ಧ ಎಫ್ಐಆರ್

130

ಪ್ರಜಾಸ್ತ್ರ ಸುದ್ದಿ

ಚಂಡೀಗಢ: ಅಥ್ಲಟಿಕ್ ಆಟಗಾರ್ತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವಸಗಿದಿ ಪ್ರಕರಣ ಸಂಬಂಧ ಹರಿಯಾಣದ ಕ್ರೀಡಾ ಸಚಿವ ಸಂದೀಪ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಥ್ಲೆಟ್ ಹಾಗೂ ಮಹಿಳಾ ತರಬೇತುದಾರರಾಗಿರುವವರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಕೇಳಿ ಬಂದಿದೆ.

ಐಪಿಸಿ ಸೆಕ್ಷನ್ 354, 354ಎ, 354ಬಿ, 342, 506ರ ಅಡಿಯಲ್ಲಿ ಸಚಿವರ ವಿರುದ್ಧ ದೂರು ದಾಖಲಾಗಿದೆ. ಅಧಿಕೃತ ಕೆಲಸದ ಸಂಬಂಧ ಕ್ರೀಡಾ ಸಚಿವರನ್ನು ಭೇಟಿಯಾಗಬೇಕಿತ್ತು. ಹೀಗಾಗಿ ಅವರ ನಿವಾಸ ಮತ್ತು ಕ್ಯಾಂಕ್ ಆಫೀಸ್ ಗೆ ಹೋದಾಗ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಆರೋಪಿಯನ್ನು ಸಚಿವ ಸಂದೀಪ್ ಸಿಂಗ್ ತಳ್ಳಿ ಹಾಕಿದ್ದಾರೆ.




Leave a Reply

Your email address will not be published. Required fields are marked *

error: Content is protected !!